Home ಟಾಪ್ ಸುದ್ದಿಗಳು ಹಾಸನದ ಹೋಲಿ ಮೌಂಟ್ ಶಾಲೆ ವಿದ್ಯಾರ್ಥಿ ಮೊಹಮ್ಮದ್ ಸಕ್ಲೇನ್ ಕರಾಟೆ ಸಾಧನೆ

ಹಾಸನದ ಹೋಲಿ ಮೌಂಟ್ ಶಾಲೆ ವಿದ್ಯಾರ್ಥಿ ಮೊಹಮ್ಮದ್ ಸಕ್ಲೇನ್ ಕರಾಟೆ ಸಾಧನೆ

ಹಾಸನ: ಇತ್ತೀಚಿಗೆ ಶಿವಮೊಗ್ಗದಲ್ಲಿ ನಡೆದ ಶಿವಮೊಗ್ಗ ಓಪನ್ 5ನೇ ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್‍ಶಿಪ್ ಪಂದ್ಯಾವಳಿಯಲ್ಲಿ ಹೋಲಿ ಮೌಂಟ್ ಶಾಲೆಯ 9 ನೇ ತರಗತಿ ಓದುತ್ತಿರುವ ವಿದ್ಯಾರ್ಥಿ ಮೊಹಮ್ಮದ್ ಸಕ್ಲೇನ್ ಕುಮಟಿ ಹಾಗೂ ಕಟಾ ಎರಡೂ ವಿಭಾಗದಲ್ಲಿ ಪ್ರಥಮ ಪ್ರಶಸ್ತಿಗಳನ್ನು ಗೆಲ್ಲುವುದರ ಮೂಲಕ ಜಿಲ್ಲೆಗೆ ಹಾಗು ಓದುತ್ತಿರುವ ಶಾಲೆಗೆ ಮಾತ್ರವಲ್ಲದೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತ ದೇಶಕ್ಕೆ ಕೀರ್ತಿ ತಂದಿದ್ದಾನೆ.

ಆಯೀಷಾ ಹಾಗು ಅಫ್ಸರ್ ಕೊಡ್ಲಿಪೇಟೆ ದಂಪತಿ ಪುತ್ರನಾಗಿರುವ ಮೊಹಮ್ಮದ್ ಸಕ್ಲೇನ್ ಹಾಸನದ ಖ್ಯಾತ ಕರಾಟೆ ತರಬೇತುದಾರರಾಗಿರುವ ಆರೀಫ್ ಅವರ ಬಳಿ ತರಬೇತಿ ಪಡೆಯುತ್ತಿದ್ದಾನೆ.

ಹಾಸನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಆರೀಫ್ ರವರ ಬಳಿ ತರಬೇತಿ ಪಡೆಯುತ್ತಿರುವ ಜ಼ಮೀರ್ ರವರ ಸುಪುತ್ರ ಶಯಾನ್ ಮತ್ತು ಹೊಲಿಮೌಂಟ್ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಗುಲ್ಜಾರ್ ಅಹ್ಮದ್ ರವರ ಸುಪುತ್ರ ಸುಝೈನ್ ರವರು ಸಹ ಉತ್ತಮ ಪ್ರದರ್ಶನ ನೀಡುವ ಮೂಲಕ ಪ್ರಥಮ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ಆಗಸ್ಟ್ 24, ಮತ್ತು 25 ರಂದು ಶಿವಮೊಗ್ಗದ ಪಿಇಎಸ್ ಕಾಲೇಜಿನ ಪ್ರೇರಣಾ ಸಭಾಂಗಣದಲ್ಲಿ ನಡೆದ ಈ ಪಂದ್ಯಾವಳಿಯಲ್ಲಿ ಶ್ರೀಲಂಕಾ, ನೇಪಾಳ ಸೇರಿದಂತೆ ದೇಶದ 13 ರಾಜ್ಯಗಳಿಂದ ಸುಮಾರು ಎರಡೂವರೆ ಸಾವಿರ ಕ್ರೀಡಾಪಟುಗಳು ಭಾಗವಹಿಸಿದ್ದ ಈ ಪಂದ್ಯಾವಳಿಗೆ ಅಮೆರಿಕದಿಂದ ಗ್ರಾಂಡ್ ಮಾಸ್ಟರ್ ಚೆರಿ ಎಫ್. ಮೌಲೆ, ಚಿತ್ರ ನಟ ಸುಮನ್ ತಲ್ವಾರ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು ಮತ್ತು ಎರಡು ವಿಭಾಗದಲ್ಲಿ ನಡೆದ ಸ್ಪರ್ಧೆಗೆ ಏಷ್ಯನ್ ತೀರ್ಪುಗಾರರು ಸೇರಿದಂತೆ ರಾಷ್ಟ್ರೀಯ ತೀರ್ಪುಗಾರರು ಆಗಮಿಸಿದ್ದರು.

Join Whatsapp
Exit mobile version