Home ಟಾಪ್ ಸುದ್ದಿಗಳು ಬೆಳ್ತಂಗಡಿ | ತಂದೆ ತೀರ್ಪುಗಾರ.. ಮಗಳಿಗೆ ಪ್ರಥಮ ಸ್ಥಾನ

ಬೆಳ್ತಂಗಡಿ | ತಂದೆ ತೀರ್ಪುಗಾರ.. ಮಗಳಿಗೆ ಪ್ರಥಮ ಸ್ಥಾನ

►LIC ಗಾಯನ ಸ್ಪರ್ಧೆಯಲ್ಲಿ ಸ್ವಜನಪಕ್ಷಪಾತ ಆರೋಪ

ಬೆಳ್ತಂಗಡಿ: ಜೀವ ವಿಮಾ ಕಂಪನಿಯ ಬೆಳ್ತಂಗಡಿ ಶಾಖಾ ವತಿಯಿಂದ ಹಮ್ಮಿಕೊಳ್ಳಲಾದ ಹೈಸ್ಕೂಲ್ ವಿಭಾಗದ ಚಲನಚಿತ್ರ ಗಾಯನ ಸ್ಪರ್ಧೆಯಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂದು ಆರೋಪ ಕೇಳಿಬಂದಿದೆ.

ಗಾಯನ ಸ್ಪರ್ಧೆಯ ಇಬ್ಬರು ತೀರ್ಪುಗಾರರಲ್ಲಿ ಸುರೇಶ್ ಎ.ಡಿ ಎಂಬುವರ ಒಬ್ಬರಾಗಿದ್ದರು. ಇವರು ಸುಗಮ ಸಂಗೀತ ತರಗತಿಯನ್ನು ಕೂಡಾ ನಡೆಸುತ್ತಿದ್ದು, ಮೊನ್ನೆ ನಡೆದ ಗಾಯನ ಸ್ಪರ್ಧೆಯಲ್ಲಿ ಪಕ್ಷಪಾತೀಯ ಧೋರಣೆಯನ್ನು ಅನುಸರಿಸುವ ಮೂಲಕ ಸ್ಪರ್ಧೆಗೆ ಕಳಂಕವನ್ನು ತಂದಿದ್ದಾರೆ. ತನ್ನ ಮಗಳಿಗೆ ಪ್ರಥಮ ಹಾಗೂ ತನ್ನ ಸಂಗೀತ ತರಗತಿಯ ವಿದ್ಯಾರ್ಥಿಗಳಿಗೆ ಎರಡನೇ ಮತ್ತು ಮೂರನೇ ಬಹುಮಾನ ನೀಡಿದ್ದಾರೆಂದು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಜೀವ ವಿಮಾ ಕಂಪನಿಯ ಬೆಳ್ತಂಗಡಿ ಶಾಖಾ ಪ್ರಬಂಧಕರಲ್ಲಿ ಮಾತನಾಡಿಸಿದಾಗ ಅವರು, ಉಡಾಫೆಯಿಂದ ವರ್ತಿಸಿ ಕಾಲ್ ಕಟ್ ಮಾಡಿದ್ದಾರೆ. ಕಲೆ,ಚಿತ್ರಕಲೆ,ಸಾಹಿತ್ಯ, ಸಂಗೀತ, ಪಂದ್ಯಾವಳಿ ಮೊದಲಾದವುಗಳ ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಾಳುಗಳ ಹೆತ್ತವರಾಗಲಿ,ಮನೆಯವರಾಗಲಿ ಇಲ್ಲವೇ ಕುಟುಂಬದವರಾಗಲಿ ಅಥವಾ ಅವರ ತರಬೇತುದಾರರಾಗಲಿ,ಗುರುಗಳಾಗಲಿ  ತೀರ್ಪುಗಾರರಾಗುವಂತಿಲ್ಲ ಇದು ಸ್ಪರ್ಧೆಯ ನಿಯಮಾವಳಿ. ಹೀಗಿರುವಾಗ ಮಗಳು ಹಾಗೂ ತನ್ನ ಶಿಷ್ಯಂದಿರುವ ಭಾಗವಹಿಸಿದ್ದ ಸ್ಪರ್ಧೆಯಲ್ಲಿ ತೀರ್ಪುಗಾರನಾಗಿದ್ದು ತಪ್ಪು ಮತ್ತು ಈ ಬಗ್ಗೆ ಆಯೋಜಕರಲ್ಲಿ ಮಾತನಾಡಿಸಿದಾಗ ಅವರು ಉಡಾಫೆಯಿಂದ ವರ್ತಿಸಿದ್ದು ಕೂಡಾ ಸರಿಯಲ್ಲ ಎಂದು ಆರೋಪಿಸಲಾಗಿದೆ.

ಜೀವ ವಿಮಾ ಕಂಪನಿ ಭಾರತದ ಸರಕಾರದ ಸ್ವಾಮ್ಯಕ್ಕೆ ಒಳಪಟ್ಟ ಪಬ್ಲಿಕ್ ಸೆಕ್ಟರ್ ಆಗಿರುತ್ತದೆ. ಇಂತಹ ಕಂಪನಿಯ ಪ್ರಬಂಧಕರು ತಾರತಮ್ಯ ನೀತಿಯನ್ನು ಅನುಸರಿಸುವುದು ಮತ್ತು ಸಾರ್ವಜನಿಕರಲ್ಲಿ ಉಡಾಫೆಯಿಂದ ವರ್ತಿಸುವುದು ಕಂಪನಿಯ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ಇದು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದಂತಾಗುತ್ತದೆ ಹಾಗಾಗಿ ಕಂಪನಿಯ ಮೇಲಾಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

Join Whatsapp
Exit mobile version