ರಾಜ್ಯಪಾಲರ ನಡೆಗೆ ಎನ್ ಎಸ್ ಯು ಐ ಖಂಡನೆ

Prasthutha|

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿರಾಜ್ಯಪಾಲರ ‘ರಾಜ್ಯಭಾರ’ವನ್ನು ಎನ್ ಎಸ್ ಯು ಐ ಜಿಲ್ಲಾ ಅಧ್ಯಕ್ಷ ಸುಹಾನ್ ಆಳ್ವ ಖಂಡಿಸಿದ್ದಾರೆ.

- Advertisement -

ಮಂಗಳೂರು ವಿಶ್ವವಿದ್ಯಾನಿಲಯದ ಘಟಿಕೋತ್ಸವ ಕಾರ್ಯಕ್ರಮಗಳು ಹಲವಾರು ವರ್ಷಗಳಿಂದ ಉತ್ತಮ ಗುಣಮಟ್ಟದಲ್ಲಿ ನಡೆಯುತ್ತಾ ಬಂದಿದೆ. ಈ ವರ್ಷ ನಡೆದ ಘಟಿಕೋತ್ಸವ ಕಾರ್ಯಕ್ರಮವೂ ಉತ್ತಮ ರೂಪುರೇಷೆಯನ್ನು ಒಳಗೊಂಡಿತ್ತು. ಕಾರ್ಯಕ್ರಮದ ಸಂಪೂರ್ಣ ವರದಿ ರಾಜ್ಯಪಾಲರಿಗೆ ಗೊತ್ತಿತ್ತು. ಆದರೆ ವೇದಿಕೆಗೆ ಬಂದ ಮೇಲೆ ರಾಜ್ಯಪಾಲರು ಹಾಗೂ ಅವರ ಅಧಿಕಾರಿ ವರ್ಗ ಕಾರ್ಯಕ್ರಮವನ್ನು ಒಟ್ಟು ಗೊಂದಲಕ್ಕೆ ಎಡೆಮಾಡಿ ಕೊಟ್ಟಿರೋದು ಅತೀವ ಬೇಸರ ತಂದಿದೆ ಎಂದು ಅವರು ಹೇಳಿದ್ದಾರೆ.

ಸಂಶೋಧನಾ ವಿದ್ಯಾರ್ಥಿಗಳು ಸೇರಿದಂತೆ ಅನೇಕರಿಗೆ ಸಾಮೂಹಿಕವಾಗಿ ನೀಡಿದ ಡಾಕ್ಟರೇಟ್ ಕಾಟಾಚಾರಕ್ಕೆ ಎಂಬಂತಿತ್ತು. ನಮ್ಮ ವಿಶ್ವವಿದ್ಯಾನಿಲಯ ಉಪಕುಲಪತಿಗಳ ಜೊತೆಗೆ ನಡೆದು ಕೊಂಡ ವರ್ತನೆಯೂ ‘ರಾಜ್ಯಭಾರ’ ಮೆರೆಯುವಂತಿತ್ತು. ಒಟ್ಟಿನಲ್ಲಿ ಒಂದು ಉತ್ತಮ ಪ್ರಶಸ್ತಿ ಪ್ರಧಾನ ಸಮಾರಂಭ ರಾಜ್ಯಪಾಲರು ಹಾಗೂ ಅವರ ಅಧಿಕಾರಿ ವರ್ಗದ ಅನಾವಶ್ಯಕ ಗೊಂದಲದ ಹಸ್ತಕ್ಷೇಪದಿಂದ ಅಸ್ತವ್ಯಸ್ತಕ್ಕೆ ಕಾರಣವಾಯಿತು. ರಾಜ್ಯಪಾಲರ ಈ ರಾಜ್ಯಭಾರವನ್ನು ಎನ್ ಎಸ್ ಯು ಐ ಖಂಡಿಸುತ್ತದೆ ಎಂದು ಸುಹಾನ್ ಆಳ್ವ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Join Whatsapp
Exit mobile version