Home ಟಾಪ್ ಸುದ್ದಿಗಳು ಸೀರೆಗಾಗಿ ಬಾಲ್ಕನಿಯಿಂದ ಮಗನನ್ನು ನೇತಾಡಿಸಿದ ಮಹಾ ತಾಯಿ !

ಸೀರೆಗಾಗಿ ಬಾಲ್ಕನಿಯಿಂದ ಮಗನನ್ನು ನೇತಾಡಿಸಿದ ಮಹಾ ತಾಯಿ !

ಫರಿದಾಬಾದ್‌: ಬಾಲ್ಕನಿಯಲ್ಲಿ ಬಿದ್ದಿದ್ದ ಸೀರೆಯನ್ನು ತರಲು ಮಹಿಳೆಯೊಬ್ಬಳು ತನ್ನ ಮಗನನ್ನು ಬಾಲ್ಕನಿಯಿಂದ ನೇತಾಡಿಸುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಘಟನೆಯ ವಿಡಿಯೋವನ್ನು ಎದುರಿನ ಕಟ್ಟಡದ ನಿವಾಸಿಯೊಬ್ಬರು ಚಿತ್ರೀಕರಿಸಿದ್ದಾರೆ.

ಮಹಿಳೆ ಮತ್ತು ಆಕೆಯ ಕುಟುಂಬ ಸದಸ್ಯರು ಅಪಾರ್ಟ್‌ ಮೆಂಟ್‌ ನ 9 ನೇ ಮಹಡಿಯಿಂದ ನೇತಾಡುತ್ತಿದ್ದ ಹುಡುಗನನ್ನು ಮೇಲಕ್ಕೆ ಎಳೆಯುತ್ತಿರುವ ಹುಚ್ಚು ಸಾಹಸವನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಘಟನೆಯ ನಂತರ ಮಹಿಳೆಗೆ ಸೊಸೈಟಿಯಿಂದ ನೋಟಿಸ್ ನೀಡಲಾಗಿದೆ.

Join Whatsapp
Exit mobile version