Home ಟಾಪ್ ಸುದ್ದಿಗಳು ಪಾಕಿಸ್ತಾನದಲ್ಲಿ ಹೆಚ್ಚಿದ ತಾಪಮಾನ: ಕಳೆದ 4 ದಿನಗಳಲ್ಲಿ 450 ಜನ ಮೃತ

ಪಾಕಿಸ್ತಾನದಲ್ಲಿ ಹೆಚ್ಚಿದ ತಾಪಮಾನ: ಕಳೆದ 4 ದಿನಗಳಲ್ಲಿ 450 ಜನ ಮೃತ

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಹೆಚ್ಚಿದ ತಾಪಮಾನದಿಂದ ಕಳೆದ 4 ದಿನಗಳಲ್ಲಿ 450 ಜನ ಸಾವಿಗೀಡಾಗಿದ್ದಾರೆ ಎಂದು ಎನ್‌ ಜಿಒ ಈಧಿ ಸಂಸ್ಥೆ ತಿಳಿಸಿದೆ ಎಂದು ವರದಿಯಾಗಿದೆ.

ಕರಾಚಿಯಲ್ಲಿ ಕಳೆದ 4 ದಿನಗಳಿಂದ ನಿರಂತರವಾಗಿ 40 ಡಿಗ್ರಿ ಸೆ. ತಾಪಮಾನವಿದ್ದು, ಸಮುದ್ರ ತೀರದಲ್ಲಿ ಬಿಸಿ ಹವೆ ಮತ್ತಷ್ಟು ಹೆಚ್ಚಳವಾಗಿದೆ ಎಂದು ಸಂಸ್ಥೆ ತಿಳಿಸಿದೆ.

ನಮ್ಮಲ್ಲಿ 4 ಶವಾಗಾರವಿದ್ದು ಈವರೆಗೆ 427 ಮೃತದೇಹಗಳನ್ನು ಸ್ವೀಕರಿಸಿದ್ದೇವೆ. ಉಳಿದ 23 ಮೃತದೇಹಗಳು ಸರ್ಕಾರಿ ಆಸ್ಪತ್ರೆಯಲ್ಲಿವೆ. ಮೃತಪಟ್ಟವರಲ್ಲಿ ಬಹುತೇಕರು ಬಡವರಾಗಿದ್ದು, ದಿನವಿಡೀ ಬಿಸಿಲಿನ ಶಾಖಕ್ಕೆ ತುತ್ತಾಗಿದ್ದಾರೆ ಎಂದು ಈಧಿ ಸಂಸ್ಥೆಯ ಮುಖ್ಯಸ್ಥ ಫೈಸಲ್‌ ಈಧಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.

Join Whatsapp
Exit mobile version