ಸಿದ್ದರಾಮಯ್ಯ ಸಮ್ಮತಿಯಿಲ್ಲದೆ ಸಿಎಂ ಬದಲಾಯಿಸಿದರೆ ಜನಾಂದೋಲನ: ಕುರುಬ ಮುಖಂಡರು

Prasthutha|

ಕೋಲಾರ: ಡಿಕೆ ಶಿವಕುಮಾರ್ ಅವರನ್ನು ಸಿಎಂ ಮಾಡಬೇಕು ಎಂದು ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ ಬಹಿರಂಗವಾಗಿ ಹೇಳಿಕೆ ನೀಡಿದ್ದರ ಬಗ್ಗೆ ಕೋಲಾರದಲ್ಲಿ ಕುರುಬ ಸಮಾಜದ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

- Advertisement -

ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಸಮರ್ಥ ಆಡಳಿತ ನೀಡುತ್ತಿದ್ದು ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿದ್ದಾರೆ. ಬಡವರಿಗೆ ಇಷ್ಟೆಲ್ಲಾ ಸಹಾಯ ಮಾಡಿದ್ದರೂ ಸಿಎಂ ಸ್ಥಾನದಿಂದ ಅವರನ್ನು ಕೆಳಗಿಳಿಸುವುದು ಎಷ್ಟು ಸರಿ? ಒಂದು ವೇಳೆ ಇಂತಹ ಯೋಚನೆ ಇದ್ದರೆ ಅದು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ

ಸಿದ್ದರಾಮಯ್ಯ ಸಮ್ಮತಿಯಿಲ್ಲದೆ ಯಾರನ್ನೇ ಸಿಎಂ ಮಾಡಿದರೆ ಜನಾಂದೋಲನ ಆಗಲಿದೆ. ಕಾಂಗ್ರೆಸ್ ಹೈ ಕಮಾಂಡ್ ಸಿಎಂ ರನ್ನ ಬದಲಿಸುವ ಮನಸ್ಸು ಮಾಡುವುದಿಲ್ಲ. ಸಿದ್ದರಾಮಯ್ಯ ಅವರೆ ಸಿಎಂ ಆಗಿರುತ್ತಾರೆ ಎಂದು ಹೇಳಿದ್ದಾರೆ.

Join Whatsapp
Exit mobile version