ತೇಗದ ಮರ ಕಡಿಯಲು ಅನುಮತಿ ನೀಡಿದ್ದ ನಾಲ್ವರು ಅಧಿಕಾರಿಗಳು ಅಮಾನತು

Prasthutha|

ಕೊಡಗು: ತೇಗದ ಮರ ಕಡಿಯಲು ಅನುಮತಿ ನೀಡಿದ್ದ ನಾಲ್ವರನ್ನು ಅಮಾನತು ಮಾಡಿ ಅರಣ್ಯ ಮತ್ತು ಪರಿಸರ ಇಲಾಖೆ ಕಾರ್ಯದರ್ಶಿ ಆದೇಶ ಹೊರಡಿಸಿದೆ.

- Advertisement -

ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕುಟ್ಟ ವಲಯ ಅರಣ್ಯ ವ್ಯಾಪ್ತಿಯಲ್ಲಿ 66 ತೇಗದ ಮರ ಕಡಿಯಲು ಅನುಮತಿ ನೀಡಿದ್ದರು. ಎಸಿಎಫ್ ಹೆಚ್.ಸೀಮಾ, ಆರ್​ಎಫ್​ಒಗಳಾದ ಅಶೋಕ ಪರಮಾನಂದ, ಬಿ.ಎಂ.ಶಂಕರ್, ಪತ್ರಾಂಕಿತ ವ್ಯವಸ್ಥಾಪಕಿ ಕೆ.ಎ.ಅನಿತಾ ಅಮಾನತುಗೊಳಗಾದ ಅಧಿಕಾರಿಗಳು.

2022ರಲ್ಲಿ ಅಕ್ರಮವಾಗಿ 66 ತೇಗದ ಮರ ಕಡಿಯಲು ಅನುಮತಿ ನೀಡಿದ್ದರು. ಪ್ರಕರಣ ಸಂಬಂಧ ಕಳೆದ ವಾರ ಡಿಸಿಎಫ್​ ಚಕ್ರಪಾಣಿ ಅಮಾನತಾಗಿದ್ದರು. ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ ಮೇರೆಗೆ ಅಮಾನತುಗೊಳಿಸಲಾಗಿತ್ತು.

- Advertisement -

66 ತೇಗದ ಮರಗಳನ್ನ ಕಡಿದುರುಳಿಸಲು ಅನುಮತಿ

ಡಿಸಿಎಫ್ ಚಕ್ರಪಾಣಿ ರಮೇಶ್ ಅವರ ಸಹಿಯನ್ನ ನಕಲು ಮಾಡಿ ಆರು ಮರಗಳ ಬದಲು ಸಂಪೂರ್ಣ ಬೆಳೆದು ನಿಂತಿರುವ ಭರ್ತಿ 66 ತೇಗದ ಮರಗಳನ್ನ ಕಡಿದುರುಳಿಸಲು ಅನುಮತಿ ನೀಡಿದ್ದರು. ಈ ಒಂದೊಂದು ಮರವೂ ಎರಡು ಮೀಟರ್​ಗಿಂತಲೂ ದಪ್ಪವಿದ್ದು. 60 ವರ್ಷಕ್ಕೂ ಅಧಿಕ ಹಳೆಯದ್ದಾಗಿದ್ದವು. ಹಾಗಾಗಿ ಈ 66 ಮರಗಳು ಎಷ್ಟೋ ಕೋಟಿ ರೂಪಾಯಿಗೆ ಬೆಲೆ ಬಾಳುತ್ತಿದ್ದವು. ಇಂತಹ ಮರಗಳನ್ನು ಕಡಿದುರುಳಿಸಲು ಈ ಅಧಿಕಾರಿ ಅನುಮತಿ ನೀಡಿದ್ದರು.

Join Whatsapp
Exit mobile version