Home ಟಾಪ್ ಸುದ್ದಿಗಳು ಗುಡ್ಡದಿಂದ ವಾಹನಗಳ ಮೇಲೆ ಉರುಳಿದ ಬಂಡೆಗಳು: ನಾಲ್ವರು ಮೃತ್ಯು

ಗುಡ್ಡದಿಂದ ವಾಹನಗಳ ಮೇಲೆ ಉರುಳಿದ ಬಂಡೆಗಳು: ನಾಲ್ವರು ಮೃತ್ಯು

ಗಂಗೋತ್ರಿ: ಗುಡ್ಡದಿಂದ ಬಂಡೆಯೊಂದು ಉರುಳಿ ಕಾರುಗಳ ಮೇಲೆ ಬಿದ್ದ ಪರಿಣಾಮ ನಾಲ್ವರು ಮೃತಪಟ್ಟಿರುವ ಘಟನೆ ಉತ್ತರಾಖಂಡದ ಗಂಗೋತ್ರಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.


ಸೋಮವಾರ ರಾತ್ರಿ ಯಾತ್ರಾರ್ಥಿಗಳು ಗಂಗೋತ್ರಿಯಿಂದ ಉತ್ತರಕಾಶಿಗೆ ಸು ನಗರದ ಬಳಿ ಹಿಂದಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ.


ಸ್ಥಳೀಯರ ನೆರವಿನಿಂದ ತಡರಾತ್ರಿ ಹಲವಾರು ಪ್ರಯಾಣಿಕರನ್ನು ರಕ್ಷಿಸಲಾಯಿತು. ಆದರೆ ನಿರಂತರವಾಗಿ ಬೀಳುತ್ತಿದ್ದ ಬಂಡೆಗಳಿಂದಾಗಿ ರಕ್ಷಣಾ ಕಾರ್ಯಾಚರಣೆ ಸ್ಥಗಿತಗೊಂಡಿದೆ. ಮೂರು ವಾಹನಗಳು ಅವಶೇಷಗಳಡಿ ಸಿಲುಕಿವೆ ಎಂದು ವಿಪತ್ತು ಸ್ವಯಂಸೇವಕ ರಾಜೇಶ್ ಕುಮಾರ್ ತಿಳಿಸಿದ್ದಾರೆ.
ಭಾರೀ ಮಳೆಯಿಂದಾಗಿ ಬಂದರಕೋಟ್ ಬಳಿ ಗಂಗೋತ್ರಿ ರಾಷ್ಟ್ರೀಯ ಹೆದ್ದಾರಿ ಸಂಚಾರ ಸ್ಥಗಿತಗೊಂಡಿದೆ.

Join Whatsapp
Exit mobile version