ಮುಂಬೈ: ರಿಲಯನ್ಸ್ ಜಿಯೋ ಪ್ರಿಪೇಯ್ಡ್ ಪ್ಲಾನ್‌ನ ಶುಲ್ಕಗಳನ್ನು ಶೇ.20ರಷ್ಟು ಏರಿಕೆ ಮಾಡಲಾಗಿದೆ. ಜುಲೈ 3ರಿಂದ ರಿಲಯನ್ಸ್ ಜಿಯೋ ಹೊಸ ರೇಟ್ ಅನ್ವಯವಾಗಲಿದೆ.
28 ದಿನಗಳವರೆಗೆ 2 ಜಿಬಿ ಡೇಟಾ (ಪ್ರತಿದಿನ ಅಲ್ಲ) ಅನ್‌ಲಿಮಿಟೆಡ್ ಕರೆಗಳು ಇರುವ ರೂ. 155ರ ಪ್ಲಾನ್ 189 ರೂ.ಗೆ ಏರಿಕೆಯಾಗಿದೆ. ಪ್ರತಿದಿನ 1 ಜಿಬಿ ಇಂಟರ್‌ನೆಟ್ ಪ್ಲಾನ್‌ಗೆ 28 ದಿನಗಳಿಗೆ 209 ರೂ. ಬದಲು 249 ರೂ., ನಿತ್ಯ 1.5 ಜಿಬಿ ಪ್ಲಾನ್‌ಗೆ 239 ರೂ. ಬದಲು 299 ರೂ., 2 ಜಿಬಿ ಪ್ಲಾನ್‌ಗೆ 299 ರೂ. ಬದಲು 349 ರೂ., 2.5 ಜಿಬಿಗೆ 349 ರೂ. ಬದಲು 399 ರೂ., 3 ಜಿಬಿಗೆ 399 ರೂ. ಬದಲು 449 ರೂ.ಗೆ ಏರಿಕೆಯಾಗಿದೆ.
ಎರಡು ಹಾಗೂ ಮೂರು ತಿಂಗಳ ಪ್ಲಾನ್‌ಗಳ ಬೆಲೆಯನ್ನೂ ಏರಿಕೆ ಮಾಡಲಾಗಿದೆ. ಪ್ರತಿ ದಿನ 1.5 ಜಿಬಿ ಇಂಟರ್‌ನೆಟ್, ಅನ್‌ಲಿಮಿಟೆಡ್ ಕರೆಗಳಿಗೆ ಇನ್ನು 479 ರೂ. ಬದಲು 579 ರೂ., 2 ಜಿಬಿಗೆ 533 ರೂ. ಬದಲು 629, 3 ತಿಂಗಳು ಅನ್‌ಲಿಮಿಟೆಡ್ ಕರೆ, 6 ಜಿಬಿ ಇಂಟರ್‌ನೆಟ್ (ಪ್ರತಿದಿನ ಅಲ್ಲ) ಪ್ಲಾನ್‌ಗೆ 395 ರೂ. ಬದಲಾಗಿ 479 ರೂ. ಪಾವತಿಸಬೇಕಾಗುತ್ತದೆ. ಮೂರು ತಿಂಗಳು ಪ್ರತಿ ದಿನ 1.5 ಜಿಬಿ ಅಂತರ್ಜಾಲ, ಅನ್‌ಲಿಮಿಟೆಡ್ ಕಾಲ್ಸ್ ಪ್ಲಾನ್‌ಗೆ 666 ರೂ. ಬದಲಾಗಿ 799 ರೂ. 2 ಜಿಬಿಗೆ 719 ರೂ. ಬದಲು 859 ರೂ., 3 ಜಿಬಿಗೆ 999 ರೂ. ಬದಲಾಗಿ 1,199 ರೂ. ಪಾವತಿಸಬೇಕಾಗಿದೆ.
336 ದಿನಗಳವರೆಗೆ ಅನ್‌ಲಿಮಿಟೆಡ್ ಕರೆಗಳು, 24 ಜಿಬಿ ಡೇಟಾ (ಪ್ರತಿದಿನ ಅಲ್ಲ) ಪ್ಲಾನ್‌ಗೆ 1,559 ರೂ. ಬದಲು 1,899 ರೂ., ಒಂದು ವರ್ಷಕ್ಕೆ ನಿತ್ಯ 2.5 ಜಿಬಿ ಪ್ಲಾನ್‌ಗೆ 2,999 ರೂ. ಬದಲು 3,599 ರೂ. ಪಾವತಿಸಬೇಕಾಗುತ್ತದೆ. ಡೇಟಾ ಆಯಡ್ ಆನ್ ಪ್ಲಾನ್‌ಗಳನ್ನೂ ಬಿಟ್ಟಿಲ್ಲ. 1 ಜಿಬಿ ಡೇಟಾಗೆ 15 ರೂ.ನಿಂದ 19 ರೂ.ಗೆ ಏರಿಕೆ ಮಾಡಲಾಗಿದೆ. ಇನ್ನು 2 ಜಿಬಿ ಡೇಟಾಗೆ 25 ರೂ.ನಿಂದ 29 ರೂ., 6 ಜಿಬಿ ಡೇಟಾಗೆ 61 ರೂ.ನಿಂದ 69 ರೂ.ಗೆ ಹೆಚ್ಚಳ ಮಾಡಲಾಗಿದೆ.
ಭಾರತದಲ್ಲಿ ಸುಮಾರು 45 ಕೋಟಿಗೂ ಅಧಿಕ ಜನ ರಿಲಯನ್ಸ್ ಜಿಯೋ ಬಳಸುತ್ತಾರೆ.