ರೆಸ್ಕ್ಯೂ ಚಾರಿಟೇಬಲ್ ಟ್ರಸ್ಟ್ (ರಿ.) ಫರಂಗಿಪೇಟೆ ಇದರ 11 ನೇ ವಾರ್ಷಿಕೋತ್ಸವದ ಅಂಗವಾಗಿ ಬೃಹತ್ ರಕ್ತದಾನ ಶಿಬಿರ

Prasthutha|

ಮಂಗಳೂರು: ಪ್ರತಿ ಮಕ್ಕಳು ಕೂಡ ಈ ದೇಶದ ಅತ್ಯಮೂಲ್ಯ ಸಂಪತ್ತಾಗಿದ್ದು, ಈ ನಿಟ್ಟಿನಲ್ಲಿ ಪೋಷಕರು ಮಕ್ಕಳು ಪ್ರಕಾಶಿಸುವ ರೀತಿಯಲ್ಲಿ ಮಾರ್ಗದರ್ಶನ ನೀಡಿ ಬೆಳೆಸುವ ಕಾರ್ಯ ಮಾಡಬೇಕು. ಯುವ ಜನಾಂಗ ಬಲಿಷ್ಠವಾದಾಗಲೇ ಈ ದೇಶ ಬಲಿಷ್ಠವಾಗುವುದಕ್ಕೆ ಸಾಧ್ಯ ಎಂದು ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು. ಅವರು ರೆಸ್ಕ್ಯೂ ಚಾರಿಟೇಬಲ್ ಟ್ರಸ್ಟ್ (ರಿ.) ಫರಂಗಿಪೇಟೆ ಇದರ 11 ನೇ ವಾರ್ಷಿಕೋತ್ಸವದ ಅಂಗವಾಗಿ ಫರಂಗಿಪೇಟೆ ಅರ್ಕುಳ ಯಶಸ್ವಿ ಹಾಲ್ ನ ಮರ್ಹೂಂ ಮುಸ್ತಾಫ ಕೆಂಪಿ ವೇದಿಕೆಯಲ್ಲಿ ನಡೆದ ವಿಧಾನ ಸಭೆಯ ನೂತನ ಸಭಾಧ್ಯಕ್ಷರಾಗಿರುವ ಯು.ಟಿ.ಖಾದರ್ ಫರೀದ್ ಅವರಿಗೆ ಸನ್ಮಾನ ಕಾರ್ಯಕ್ರಮ, ಬೃಹತ್ ರಕ್ತದಾನ ಶಿಬಿರ, ಆರೋಗ್ಯ ಕಾರ್ಡ್ ವಿತರಣೆ ಹಾಗೂ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ವಿತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

- Advertisement -

ಮಾಜಿ ಸಚಿವ ಬಿ.ರಮಾನಾಥ ರೈ ಅರೋಗ್ಯ ಕಾರ್ಡ್ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು ರಕ್ತದಾನ ಶ್ರೇಷ್ಠವಾದ ದಾನವಾಗಿದ್ದು, ಮನುಷ್ಯನ ನಡುವೆ ಪ್ರೀತಿ ವಿಶ್ವಾಸಕ್ಕೆ ಉತ್ತಮ ಕೊಂಡಿಯಾಗಿದೆ ಎಂದು ಅವರು ತಿಳಿಸಿದರು. ಸರ್ವಧರ್ಮದವರು ಸಮನ್ವಯತೆಯಲ್ಲಿ ಬದುಕುವುದು ಹೊರತು ಜಾತಿ, ಭಾಷೆಯ ಹೆಸರಿನಲ್ಲಿ ವಿಭಜನೆಯಾಗಬಾರದು ಎಂದು ಅವರು ಹೇಳಿದರು.

ದಾಖಲೆಯ ರಕ್ತದಾನ
ಅಬ್ದುಲ್ ಜಬ್ಬಾರ್ ಮಾರಿಪಳ್ಳ ಇವರ ಸಾರಥ್ಯದಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರದಲ್ಲಿ 879 ಮಂದಿ ರಕ್ತದಾನ ಮಾಡುವುದರ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸದಲ್ಲೆ ದಾಖಲೆ ನಿರ್ಮಿಸಿದ್ದಾರೆ. ಜಾತಿ ಮತ ಬೇದ ಇದಲ್ಲದೆ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಮತ್ತು ಆಸಕ್ತರಿಗೆ ಆರೋಗ್ಯ ಕಾರ್ಡ್ ನೀಡಿ ಸಮಾಜಕ್ಕೆ ಶಕ್ತಿ ತುಂಬುವ ಕೆಲಸ ರೆಸ್ಕ್ಯೂ ಚಾರಿಟೇಬಲ್ ಟ್ರಸ್ಟ್ ನಡೆಸಿದೆ.

- Advertisement -

ರೆಸ್ಕ್ಯೂ ಚಾರಿಟೇಬಲ್ ನ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಮಾರಿಪಳ್ಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಕೆ.ಪಿ.ಸಿ‌.ಸಿ‌ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ ಮೂಲ್ಕಿ, ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಮಿಥುನ್‌ ರೈ, ಮಾಜಿ ಜಿ.ಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ. ಕಣಚ್ಚೂರು ಮೆಡಿಕಲ್ ಕಾಲೇಜಿನ ಮ್ಯಾನೇಜಿಂಗ್ ಡೈರೆಕ್ಟರ್ ಅಬ್ದುಲ್ ರಹಿಮಾನ್ ಕನಚೂರು, ಉದ್ಯಮಿಗಳಾದ ಝಕಾರಿಯಾ ಜೊಕಟ್ಟೆ, ಉದ್ಯಮಿ ಹಾಜಿ ಶರೀಫ್ ಬೋಳಾರ್, ಮಹಮ್ಮದ್ ಯುನೂಸ್ ಹಸನ್, ಐ.ಅಶ್ರಫ್ ಮೈಸೂರು, ಮಹಮ್ಮದ್ ಬಶೀರ್, ಅಬ್ದುಲ್ ಸಲಾಂ, ಗಿರಿಧರ್ ಶೆಟ್ಟಿ, ಬಂಟ್ವಾಳ ಡಿ.ವೈ.ಎಸ್.ಪಿ. ಪ್ರತಾಪ್ ಸಿಂಗ್ ಥೋರಾಟ್, ಅಬ್ದುಲ್ ಲತೀಫ್ ಗುರುಪುರ, ಪುರಸಭಾ ಅಧ್ಯಕ್ಷ ಮಹಮ್ಮದ್ ಶರೀಫ್, ಪುದು ಗ್ರಾ.ಪಂ‌ ಅಧ್ಯಕ್ಷೆ ರಶೀದಾ ಭಾನು, ಉದ್ಯಮಿ, ಬಂಟ್ವಾಳ ವಾಲಿಬಾಲ್ ಅಸೋಸಿಯೇಷನ್ ಗೌರವಾಧ್ಯಕ್ಷ ಶ್ರೀಕಾಂತ್ ಶೆಟ್ಟಿ, ಮಾಜಿ ಜಿ.ಪಂ ಸದಸ್ಯ ಫಾರೂಕ್ ಫರಂಗಿಪೇಟೆ, ಯುವ ಉದ್ಯಮಿ ಅಸೀರ್ ಮೇಲ್ಮನೆ ಫರಂಗಿಪೇಟೆ, ಅಲಂಕಾರು ಬೀಡಿ ಮಾಲಕ ಯೂಸುಫ್ ಅಲಂಕಾರು, ರಮ್ಲಾನ್ ಮಾರಿಪಳ್ಳ, ಪ್ರಮುಖರಾದ ಆಸೀಫ್ ಡೀಲ್ಸ್, ಸಾಹುಲ್ ಹಮೀದ್, ತಾಹೀರ್ ಸಾಲ್ಮರ, ಹನೀಫ್ ಹಾಜಿ‌ ಗೋಳ್ತಮಜಲು, ಇಸ್ಮಾಯಿಲ್ ಕೆ.ಇ.ಎಲ್, ಯು.ಪಿ ಇಬ್ರಾಹಿಂ, ಇಕ್ಬಾಲ್ ಸುಜೀರ್, ಟಿ.ಕೆ ಬಶೀರ್ ಫರಂಗಿಪೇಟೆ, ಅಸೀಪ್ ಇಕ್ಬಾಲ್, ಝಿಯಾವುದ್ದೀನ್ ಮಂಗಳೂರು, ಸಿ.ಎಮ್ ಫಾರೂಕ್, ರೆಸ್ಕ್ಯೊ ಚಾರಿಟೇಬಲ್ ಟ್ರಸ್ಟ್ ನ ಪ್ರಮುಖರಾದ ಎಸ್.ಎಂ ಭಾಷಾ, ಸಲೀಂ ಅಲ್ತಾಫ್ ಡೈಮಂಡ್, ಶಬೀರ್ ಕೆಂಪಿ, ಅಬ್ದುಲ್ ಲತೀಫ್ ಅರಫಾ, ಮುಸ್ತಫಾ ಮೇಲ್ಮನೆ ಫರಂಗಿಪೇಟೆ, ಸಮಾದ್ ಅಸೀಫ್ ಮೇಲ್ಮನೆ ಫರಂಗಿಪೇಟೆ, ಸಾಹುಲ್ ಹಮೀದ್, ಜಾಫರ್ ಟಿ.ಎಚ್, ಗಫೂರ್ ಹಸನ್, ಖಾದರ್ ಅರಫಾ, ಇಝ್ಹಾ ಬಜಾಲ್, ರಝಾಕ್ ಹತ್ತನೇ ಮೈಲ್ ಕಲ್ಲು, ಹಕೀಂ ಮಾರಿಪಳ್ಳ, ರಫೀಕ್ ಕೆ.ಇ.ಎಲ್, ಮಲೀಕ್ ಕುಂಪನಮಜಲು, ರಿಯಾಝ್ ಕುಂಪನಮಜಲ್, ಅಶ್ರಫ್ ಮಲ್ಲಿ, ಇಮ್ರಾನ್ ಮಾರಿಪಳ್ಳ ಮತ್ತಿತರರು ಉಪಸ್ಥಿತರಿದ್ದರು.

ಹಿದಾಯ ಫೌಂಡೇಶನ್ ಮಂಗಳೂರು ಸಂಘಟನೆಗೆ ಕಾರ್ಯಕ್ರಮದಲ್ಲಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ಚಾರಿಟೇಬಲ್ ಟ್ರಸ್ಟ್ ನ ಸಲಹಾ ಸಮಿತಿ ಸದಸ್ಯ ಹನೀಫ್ ಖಾನ್ ಕೋಡಾಜೆ ಪ್ರಸ್ತಾವಿಕವಾಗಿ ಮಾತನಾಡಿದರು. ಚಾರಿಟೇಬಲ್ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಹಾಶೀರ್ ಪೇರಿಮಾರ್ ಸ್ವಾಗತಿಸಿದರು. ಸಲಾಂ ಸುಜೀರ್ ಧನ್ಯವಾದ ನೀಡಿದರು.

Join Whatsapp
Exit mobile version