Home ಟಾಪ್ ಸುದ್ದಿಗಳು ಕೊಪ್ಪಳ ಜಿಲ್ಲಾಸ್ಪತ್ರೆಯ ಶೌಚಾಲಯದಲ್ಲಿ ಭ್ರೂಣ ಪತ್ತೆ! ಡಿಹೆಚ್​ಒ ವಿರುದ್ಧ ಸಚಿವ ತಂಗಡಗಿ ಗರಂ

ಕೊಪ್ಪಳ ಜಿಲ್ಲಾಸ್ಪತ್ರೆಯ ಶೌಚಾಲಯದಲ್ಲಿ ಭ್ರೂಣ ಪತ್ತೆ! ಡಿಹೆಚ್​ಒ ವಿರುದ್ಧ ಸಚಿವ ತಂಗಡಗಿ ಗರಂ

ಕೊಪ್ಪಳ: ಜಿಲ್ಲಾಸ್ಪತ್ರೆಯ ಶೌಚಾಲಯದಲ್ಲಿ ಭ್ರೂಣ ಪತ್ತೆಯಾಗಿರುವ ಬಗ್ಗೆ ಕೆಡಿಪಿ ಸಭೆಯಲ್ಲಿ ಪ್ರಸ್ತಾಪಿಸಿದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ, ಡಿಹೆಚ್​ಒ ಮತ್ತು ಕಿಮ್ಸ್ ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡರು. ಜಿಲ್ಲಾಸ್ಪತ್ರೆಯ ಟಾಯ್ಲೆಟ್​ನಲ್ಲಿ ಭ್ರೂಣ ಪತ್ತೆಯಾಗುತ್ತದೆ ಅಂದರೆ ಅದಕ್ಕಿಂತ ಹೀನ ಸ್ಥಿತಿ ಬೇಕಾ ಎಂದು ಆಕ್ರೋಶ ಹೊರಹಾಕಿದ್ದಾರೆ.

ಕೊಪ್ಪಳ ಜಿಲ್ಲಾಸ್ಪತ್ರೆಯ ಆಡಳಿತ ಕುಸಿದು ಹೋಗಿದೆ. ಜಿಲ್ಲಾಸ್ಪತ್ರೆಯ ಟಾಯ್ಲೆಟ್ ನಲ್ಲಿ ಭ್ರೂಣ ಪತ್ತೆಯಾಗುತ್ತೆ ಅಂದರೆ ಅದಕ್ಕಿಂತ ಹೀನ ಸ್ಥಿತಿ ಬೇಕಾ ಎಂದು ಡಿಹೆಚ್ಓ ಅಲಖಾನಂದ ಮಳಗಿ, ಕಿಮ್ಸ್ ನಿರ್ದೇಶಕ ವೈಜನಾಥ ಇಟಗಿ ವಿರುದ್ಧ ಆಕ್ರೋಶ ಹೊರಹಾಕಿದ ತಂಗಡಗಿ, ಜಿಲ್ಲಾ ಆಸ್ಪತ್ರೆಯ ಅದ್ವಾನದ ಬಗ್ಗೆ ಮಾಧ್ಯಮಲ್ಲಿ ಬರುತ್ತದೆ. ಸುಮ್ನೆ ಯಾಕೆ ನಮ್ಮ ಜಿಲ್ಲೆ ಮರ್ಯಾದೆ ಹಾಳು ಮಾಡುತ್ತೀರಿ? ಒಂದು ಆಸ್ಪತ್ರೆಯನ್ನ ಸರಿಯಾಗಿ ನಡೆಸಲು ಆಗುದಿಲ್ಲವೇ ಎಂದು ಪ್ರಶ್ನಿಸಿದರು.

Join Whatsapp
Exit mobile version