ಜಾರ್ಖಂಡ್ ಮಾಜಿ ಸಿಎಂ ಹೇಮಂತ್ ಸೊರೆನ್ ಗೆ ಜಾಮೀನು

Prasthutha|

ಜಾರ್ಖಂಡ್: ಭೂ ಹಗರಣ ಕೇಸ್ ನಲ್ಲಿ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರಿಗೆ ಅಲ್ಲಿನ ಹೈಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.

- Advertisement -


ಜಾರ್ಖಂಡ್ ಮುಕ್ತಿ ಮೋರ್ಚಾ ನಾಯಕ ನಕಲಿ ದಾಖಲೆಗಳ ಮೂಲಕ ಹಲವಾರು ಕೋಟಿ ರೂಪಾಯಿ ಮೌಲ್ಯದ ದೊಡ್ಡ ಪ್ರಮಾಣದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ದಾಖಲೆಗಳನ್ನು ತಿರುಚುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ಜಾರಿ ನಿರ್ದೇಶನಾಲಯ ಸೊರೆನ್ ಅವರನ್ನು ಜನವರಿ 31 ರಂದು ಬಂಧಿಸಿ, ರಾಂಚಿಯ ಬಿರ್ಸಾ ಮುಂಡಾ ಸೆಂಟ್ರಲ್ ಜೈಲಿನಲ್ಲಿ ಇರಿಸಿತ್ತು.

ಸೊರೇನ್ ಅಪರಾಧದಲ್ಲಿ ಅವರು ತಪ್ಪಿತಸ್ಥರಲ್ಲ ಎಂದು ನ್ಯಾಯಾಲಯವು ತೀರ್ಪು ನೀಡಿದೆ ಎಂದು ಅವರ ವಕೀಲರಾದ ಅರುಣಾಭ್ ಚೌಧರಿ ಹೇಳಿದ್ದಾರೆ. ಸೊರೇನ್‌ ಅವರ ಜಾಮೀನು ಅರ್ಜಿಯ ತೀರ್ಪನ್ನು ಹೈಕೋರ್ಟ್ ಜೂನ್ 13ರಂದು ಕಾಯ್ದಿರಿಸಿತ್ತು. “ಸೋರೆನ್‌ಗೆ ಜಾಮೀನು ನೀಡಲಾಗಿದೆ. ನ್ಯಾಯಾಲಯವು ಪ್ರಾಥಮಿಕವಾಗಿ ಅವರು ಅಪರಾಧದಲ್ಲಿ ತಪ್ಪಿತಸ್ಥರಲ್ಲ ಮತ್ತು ಜಾಮೀನಿನ ಮೇಲೆ ಅರ್ಜಿದಾರರು ಅಪರಾಧ ಮಾಡುವ ಸಾಧ್ಯತೆಯಿಲ್ಲ” ಎಂದು ಚೌಧರಿ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

Join Whatsapp
Exit mobile version