ಬೋಸ್ಟನ್: ಸೇತುವೆಯ ಮೇಲೆ ಸಾಗುತ್ತಿದ್ದ ರೈಲಿನಲ್ಲಿ ಬೆಂಕಿ ಹೊತ್ತಿಕೊಂಡ ಘಟನೆ ಅಮೆರಿಕದ ಬೋಸ್ಟನ್ ನ ಹೊರವಲಯದಲ್ಲಿ ಶುಕ್ರವಾರ ನಡೆದಿದ್ದು, ಪ್ರಯಾಣಿಕರು ಕಿಟಕಿಯ ಜಿಗಿದಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸುಮಾರು 200 ಜನರನ್ನು ರೈಲಿನಿಂದ ಹೊರಕ್ಕೆ ಸ್ಥಳಾಂತರಿಸಲಾಯಿತು. ಹೆಚ್ಚಿನವರು ರೈಲಿನ ಕಿಟಕಿಗಳ ಮೂಲಕ ತಪ್ಪಿಸಿಕೊಂಡರು, ಒಬ್ಬ ಮಹಿಳೆ ಕೆಳಗಿನ ಮಿಸ್ಟಿಕ್ ನದಿಗೆ ಹಾರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೈಲಿನ ಶೀಟ್ ಮೆಟಲ್ ಅಥವಾ ಸೈಡ್ ಪ್ಯಾನೆಲ್ ನ ಒಂದು ಭಾಗವು ಮೂರನೇ ಹಳಿಯೊಂದಿಗೆ ತಾಗಿದ ಪರಿಣಾಮ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಅಧಿಕಾರಿಗಳು ಪ್ರಾಥಮಿಕ ತಪಾಸಣೆಯ ಬಳಿಕ ಅಧಿಕಾರಿಗಳು ತಿಳಿಸಿದ್ದಾರೆ.