ಗಣೇಶೋತ್ಸವ ಮೆರವಣಿಗೆಯಲ್ಲಿ ಗಲಾಟೆ ಆರೋಪ: 500 ಮಂದಿ ಮುಸ್ಲಿಮರ ವಿರುದ್ಧ FIR

Prasthutha|

ಹಾವೇರಿ: ರಾಣೆಬೆನ್ನೂರಿನಲ್ಲಿ ನಡೆದ ಗಣೇಶೋತ್ಸವ ಮೆರವಣಿಗೆಯ ಮೇಲೆ ನಡೆದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ 500 ಮಂದಿ ಅಪರಿಚಿತ ಮಸ್ಲಿಮರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಕ್ರೀಡಾ ಹವ್ಯಾಸ ಸಂಘದ ಅಧ್ಯಕ್ಷೆ ವಿಜಯಲಕ್ಷೀ ಎಂಬವರು ದೂರು ನೀಡಿದ ಹಿನ್ನೆಲೆ FIR ದಾಖಲಿಸಲಾಗಿದೆ.

- Advertisement -


ಮಂಗಳವಾರ ರಾತ್ರಿ 8.30 ಗಂಟೆ ಸುಮಾರಿಗೆ ರಾಣೆಬೆನ್ನೂರು ಶಹರದ ದುರ್ಗಾ ಸರ್ಕಲ್ ಹತ್ತಿರ ಗಣೇಶ ಮೂರ್ತಿ ಮೆರವಣಿಗೆ ಸಾಗುತ್ತಿರುವಾಗ 300ರಿಂದ 500 ಮಂದಿ ಅಪರಿಚಿತರು ಗುಂಪು ಕಟ್ಟಿ ಕೊಂಡು ಮಾರಕಾಸ್ತ್ರಗಳನ್ನು ಹಿಡಿದು ದಾಳಿ ಮಾಡಿದ್ದಾರೆ ಎಂದು ದೂರಿನಲ್ಲಿ ವಿಜಯಲಕ್ಷೀ ಉಲ್ಲೇಖಿಸಿದ್ದಾರೆ.

Join Whatsapp
Exit mobile version