ಬಾಲಿವುಡ್ ನಟಿ ನೂರ್ ಮಾಲಾಬಿಕಾ ದಾಸ್ ಆತ್ಮಹತ್ಯೆ

Prasthutha|

ಮುಂಬೈ: ಬಾಲಿವುಡ್ ನಟಿ ನೂರ್ ಮಾಲಾಬಿಕಾ ದಾಸ್ ಮುಂಬೈನ ಅಪಾರ್ಟ್ ಮೆಂಟ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -


2023ರಲ್ಲಿ ಬಿಡುಗಡೆಗೊಂಡಿದ್ದ ‘ದಿ ಟ್ರಯಲ್‘ ವೆಬ್ ಸರಣಿಯಲ್ಲಿ ನಟಿ ಕಾಜೋಲ್ ಜತೆ ಮಾಲಾಬಿಕಾ ದಾಸ್ ನಟಿಸಿದ್ದರು.


ನೂರ್ ಮಾಲಾಬಿಕಾ ಅಪಾರ್ಟ್ ಮೆಂಟ್ ನಿಂದ ದುರ್ವಾಸೆ ಬರುತ್ತಿದ್ದರಿಂದ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ನಟಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

- Advertisement -


31 ವರ್ಷದ ನೂರ್ ಮಾಲಾಬಿಕಾ ದಾಸ್ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ.

Join Whatsapp
Exit mobile version