ಭಾರತೀಯರ ರೈತ ಹೋರಾಟಕ್ಕೆ ಹಾಲಿವುಡ್ ನಟಿ ಸುಸಾನ್ ಸಾರಾಂಡನ್ ಬೆಂಬಲ

Prasthutha|

ನವದೆಹಲಿ : ಭಾರತದಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಇದೀಗ ಹಾಲಿವುಡ್ ಸ್ಟಾರ್ ಸುಸಾನ್ ಸಾರಾಂಡನ್ ಬೆಂಬಲಿಸಿದ್ದದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ರೈತರ ಹೋರಾಟವನ್ನು ಬೆಂಬಲಿಸುವುದಾಗಿ ತಿಳಿಸಿದ್ದಾರೆ.

- Advertisement -

“ಭಾರತದಲ್ಲಿ ನಡೆಯುತ್ತಿರುವ ರೈತರ ಹೋರಾಟದ ಜೊತೆ ಬೆಂಬಲವಾಗಿ ನಿಲ್ಲುತ್ತೇನೆ. ಅವರು ಯಾರು ಮತ್ತು ಯಾತಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂಬುದನ್ನು ಕೆಳಗೆ ಓದಿ” ಎಂದು ಟ್ವೀಟ್ ಮಾಡಿರುವ ಸಾರಾಂಡನ್, ದೆಹಲಿ ರೈತರ ಪ್ರತಿಭಟನೆಗೆ ಸಂಬಂಧಿಸಿದ ನ್ಯೂಯಾರ್ಕ್ ಟೈಮ್ಸ್ ವರದಿ ಲಿಂಕ್ ಅನ್ನು ಶೇರ್ ಮಾಡಿದ್ದಾರೆ.

ಅಂತಾರಾಷ್ಟ್ರೀಯ ಖ್ಯಾತಿಯ ಪಾಪ್ ಗಾಯಕಿ ರಿಹಾನ್ನಾ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಕುರಿತು ಟ್ವೀಟ್ ಮಾಡಿದ ಬಳಿಕ, ಭಾರತದ ಅನ್ನದಾತರ ಹೋರಾಟ ಇಡೀ ಜಗತ್ತಿನ ಗಮನ ಸೆಳೆದಿದೆ.  

Join Whatsapp
Exit mobile version