ಪ್ರಜಾಪ್ರಭುತ್ವ ದಿನಾಚರಣೆ | ದ.ಕ.ಜಿಲ್ಲೆಯಲ್ಲಿ ಮಾನವ ಸರಪಳಿ

Prasthutha|

- Advertisement -

ಮಂಗಳೂರು: ಸಂವಿಧಾನದ ಆಶಯ ಜಾಗೃತಿಗೊಳಿಸುವ ಮಹಾದಾಶಯದೊಂದಿಗೆ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆ ನಿಮಿತ್ತ ದ.ಕ.ಜಿಲ್ಲೆಯಲ್ಲಿ ಮೂಲ್ಕಿ ಹೆಜಮಾಡಿ ಟೋಲ್ ಗೇಟ್‍ನಿಂದ ಸುಳ್ಯ ಸಂಪಾಜೆ ಗೇಟ್‍ವರೆಗೆ ಬೃಹತ್ ಮಾನವ ಸರಪಳಿ ನಡೆಯಿತು.

ಮಂಗಳೂರಿನ‌ ಸರ್ಕ್ಯೂಟ್ ಹೌಸ್ ಬಳಿ ನಡೆದ ಬೃಹತ್ ಮಾನವ ಸರಪಳಿಯ ಸಭಾ ಕಾರ್ಯಕ್ರಮದಲ್ಲಿ ನಾಡಗೀತೆಯ ಬಳಿಕ ವಿಧಾನ ಪರಿಷತ್ ಸದಸ್ಯ‌ ಡಾ.ಮಂಜುನಾಥ ಭಂಡಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

- Advertisement -

ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ,ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಶುಭ ಹಾರೈಸಿದರು. ದ.ಕ.ಜಿಲ್ಲಾಧಿಕಾರಿ ‌ಮುಲ್ಲೈ ಮುಗಿಲನ್ ಎಂಪಿ‌ ಅವರುಸಂವಿಧಾನ ಪ್ರಸ್ತಾವನೆ ಓದಿದರು.

ಬೃಹತ್ ಮಾನವ ಸರಪಳಿ ನಿರ್ಮಿಸಿ, ಸ್ವಾತಂತ್ರ್ಯ, ಸಮಾನತೆ ಮತ್ತು ಭಾತೃತ್ವ, ಒಗ್ಗಟ್ಟಿನ ಮಂತ್ರ ಜಪಿಸಲಾಯಿತು. ಸಂವಿಧಾನದ ಪೀಠಿಕೆ ಓದುವುದರ ಮೂಲಕ ಅದರ ಬಗೆಗಿನ ಬದ್ಧತೆ ಪ್ರದರ್ಶಿಸಿದರು. ಮಾನವ ಸರಪಳಿಯುದ್ದಕ್ಕೂ ವಿವಿಧ ಶಾಲಾ, ಕಾಲೇಜಿನ ವಿದ್ಯಾರ್ಥಿಗಳು, ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಕಾರ್ಯಕರ್ತರು ತ್ರಿವರ್ಣ ಧ್ವಜ ಹಿಡಿದು ಘೋಷಣೆ ಕೂಗಿದರು.



Join Whatsapp
Exit mobile version