ಲೋರೆಟ್ಟೋ ಪದವು: ನೂತನ ಮದ್ರಸ ಕಟ್ಟಡ ಉದ್ಘಾಟನೆ

Prasthutha|

ಬದ್ರ್ ಜುಮ್ಮಾ ಮಸೀದಿ ಟಿಪ್ಪುನಗರ ಲೋರೆಟ್ಟೋ ಪದವು ಇರ್ಷಾದುಸ್ಸಿಬಿಯಾನ್ ಮದ್ರಸ ಇದರ ನೂತನ ಮದ್ರಸ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ ದಿನಾಂಕ 13/09/2024 ಶುಕ್ರವಾರ ಸಂಜೆ 7.30ಕ್ಕೆ ನಡೆಯಿತು.

- Advertisement -

ಈ ಸಂದರ್ಭದಲ್ಲಿ ಉಸ್ಮಾನ್ ಫೈಝಿ ತೋಡಾರು, KM ಅಬ್ದುಲ್ಲಾ ಮುಸ್ಲಿಯಾರ್ ಮಾಜಿ ಖತೀಬ್ BJM, ಅನ್ವರ್ ಅಲಿ ದಾರಿಮಿ ಕತೀಬರು BJM, ಇರ್ಷಾದ್ ದಾರಿಮಿ ಮಿತ್ತಬೈಲ್, ರಫೀಕ್ ಮಾಸ್ಟರ್ ಖ್ಯಾತ ಪ್ರೇರಣೆ ತರಬೇತುದಾರರು ಮತ್ತು ಆಡಳಿತ ಕಮಿಟಿ ಸದಸ್ಯರು ಜಮಾಹತ್ ಬಾಂದವರು ಭಾಗವಹಿಸಿದ್ದರು. ಅಲ್ಲದೇ ಈ ಕಾರ್ಯಕ್ರಮ ಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಜನಾಬ್ ಮುಹಮ್ಮದ್ ಅಶ್ರಫ್ ಸಂಸ್ಥಾಪಕರು ನ್ಯೂ ಇಂಡಿಯಾ ಚಾರಿಟೇಬಲ್ ಟ್ರಸ್ಟ್ ಇವರಿಗೆ ವೇದಿಕೆಯಲ್ಲಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಈ ಕಾರ್ಯಕ್ರಮ ಕ್ಕೆ ಜಮಾಹತ್ ಬಾಂದವರು ಹಿರಿಯರು ಕಿರಿಯರು ಮಹಿಳೆಯರು ಮಕ್ಕಳು ಬಾಗವಹಿಸಿದ್ದರು. ಈ ಕಾರ್ಯಕ್ರಮ ವನ್ನು ದಾವೂದ್ ದಾರಿಮಿ ಸ್ವಾಗತಿಸಿ ಶಫೀಕ್ ವಂದಿಸಿದರು.



Join Whatsapp
Exit mobile version