Home ಟಾಪ್ ಸುದ್ದಿಗಳು ದೆಹಲಿ ಅಬಕಾರಿ ಹಗರಣ| ಕೆ.ಸಿ.ಆರ್ ಪುತ್ರಿ ಕೆ.ಕವಿತಾಗೆ ಸಿಬಿಐ ನೋಟಿಸ್

ದೆಹಲಿ ಅಬಕಾರಿ ಹಗರಣ| ಕೆ.ಸಿ.ಆರ್ ಪುತ್ರಿ ಕೆ.ಕವಿತಾಗೆ ಸಿಬಿಐ ನೋಟಿಸ್

ಹೈದರಾಬಾದ್: 2021-22ರ ದೆಹಲಿ ಅಬಕಾರಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ.ಕವಿತಾ ಅವರಿಗೆ ಸಿಬಿಐ ನೋಟಿಸ್ ಜಾರಿ ಮಾಡಿದೆ.

‘ಪ್ರಕರಣದ ತನಿಖೆಯ ವೇಳೆ, ಕವಿತಾಗೆ ಸಂಬಂಧಿಸಿದ ಕೆಲವು ಸಂಗತಿಗಳು ಬೆಳಕಿಗೆ ಬಂದಿವೆ. ಹಾಗಾಗಿ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಸಲುವಾಗಿ ನಿಮ್ಮನ್ನು ವಿಚಾರಣೆಗೆ ಒಳಪಡಿಸುವ ಅಗತ್ಯವಿದೆ’ ನೋಟಿಸ್ ನಲ್ಲಿ, ಉಲ್ಲೇಖಿಸಲಾಗಿದೆ.

2021-22ರ ದೆಹಲಿ ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಇತರ 14 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ಉದ್ಯಮಿ ಅಮಿತ್ ಅರೋರ ಅವರು ಜಾರಿ ನಿರ್ದೇಶನಾಲಯದ (ಇ.ಡಿ) ವಿಚಾರಣೆ ವೇಳೆ ಕವಿತಾ ಅವರ ಹೆಸರನ್ನು ಹೇಳಿದ್ದರು. ಹೀಗಾಗಿ, ಇ.ಡಿ ಅರೋರಾ ಅವರ ರಿಮಾಂಡ್ ವರದಿಯಲ್ಲಿ ಕವಿತಾ ಹೆಸರನ್ನು ಉಲ್ಲೇಖಿಸಿತ್ತು. ಅದರಂತೆ ಸಿಬಿಐ ನೋಟಿಸ್ ನೀಡಿದೆ.

ಮಾಜಿ ಸಂಸದೆಯೂ ಆಗಿರುವ ಕವಿತಾ ಅವರು, ಇದು ಬಿಜೆಪಿಯವರ ರಾಜಕೀಯ ಷಡ್ಯಂತ್ರ ಎಂದು ಟೀಕಿಸಿದ್ದಾರೆ.

Join Whatsapp
Exit mobile version