Home ಟಾಪ್ ಸುದ್ದಿಗಳು ಸಿಎಂ ಭೂಪೇಶ್ ಬಘೇಲ ಕೈಗೆ ಚಾವಟಿಯಿಂದ ಹೊಡೆತ !

ಸಿಎಂ ಭೂಪೇಶ್ ಬಘೇಲ ಕೈಗೆ ಚಾವಟಿಯಿಂದ ಹೊಡೆತ !

ರಾಯ್ಪುರ: ಛತ್ತೀಸ್ ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಮಂಗಳವಾರ ರಾಜ್ಯದ ದುರ್ಗ್ ಜಿಲ್ಲೆಯಲ್ಲಿ ಗೌರಾ-ಗೌರಿ ಪೂಜೆಯ ಸಂದರ್ಭದಲ್ಲಿ ಧಾರ್ಮಿಕ ಆಚರಣೆಯ ಭಾಗವಾಗಿ ವ್ಯಕ್ತಿಯೊಬ್ಬರಿಂದ ಚಾವಟಿಯಿಂದ ಹೊಡೆಸಿಕೊಂಡ ಘಟನೆ ನಡೆದಿದೆ. ಇದರ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಭೂಪೇಶ್ ಬಘೇಲ್ ಅವರು ಛತ್ತೀಸ್ ಗಢದ ದುರ್ಗ್ ನ ಜಂಜಗಿರಿಗೆ ಆಗಮಿಸಿ, ಗೌರಿ-ಗೌರಾ ಪೂಜೆಯ ಆಚರಣೆಯಲ್ಲಿ ಭಾಗವಹಿಸಿದ್ದರು.

ತಮಗೆ ವ್ಯಕ್ತಿಯೊಬ್ಬರು ಹೊಡೆಯುತ್ತಿರುವ ವೀಡಿಯೊವನ್ನು ಹಂಚಿಕೊಂಡ ಭೂಪೇಶ್ ಬಾಘೇಲ್,  ಸ್ಥಳೀಯ ಬಿರೇಂದರ್ ಠಾಕೂರ್ ಅವರು ಆಚರಣೆಯ ಭಾಗವಾಗಿ ಮುಖ್ಯಮಂತ್ರಿಯ ಕೈಗಳಿಗೆ ಚಾವಟಿಯಿಂದ ಹೊಡೆದರು, ಏಕೆಂದರೆ ಹೊಡೆತ ದುಷ್ಟತನವನ್ನು ತೆಗೆದುಹಾಕುತ್ತವೆ ಮತ್ತು ರಾಜ್ಯದ ಜನರಿಗೆ ಸಂತೋಷ ಸಮೃದ್ಧಿಯನ್ನು ತರುತ್ತವೆ ಎಂದು ನಂಬಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

Join Whatsapp
Exit mobile version