Home ಟಾಪ್ ಸುದ್ದಿಗಳು ಆಂಧ್ರ ಮಾಜಿ ಸಿಎಂ ವೈ.ಎಸ್‌‍. ರಾಜಶೇಖರ ರೆಡ್ಡಿಯ ಪ್ರತಿಮೆಗೆ ಬೆಂಕಿ

ಆಂಧ್ರ ಮಾಜಿ ಸಿಎಂ ವೈ.ಎಸ್‌‍. ರಾಜಶೇಖರ ರೆಡ್ಡಿಯ ಪ್ರತಿಮೆಗೆ ಬೆಂಕಿ

ಹೈದರಾಬಾದ್‌: ಅವಿಭಜಿತ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್‌‍. ರಾಜಶೇಖರ ರೆಡ್ಡಿ ಪ್ರತಿಮೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಘಟನೆ ರಾಜ್ಯದ ಬಾಪಟ್ಲಾ ಜಿಲ್ಲೆಯಲ್ಲಿ ಬಾಪಟ್ಲಾ ಜಿಲ್ಲೆಯ ಅಡ್ಡೆಪಳ್ಳಿ ಎಂಬ ಗ್ರಾಮದಲ್ಲಿ ನಡೆದಿದೆ. ರಾಜಶೇಖರ ರೆಡ್ಡಿ ಅವರ ಮೂರ್ತಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಟಿಡಿಪಿ ಪಕ್ಷದ ಧ್ವಜಸ್ಥಂಬವನ್ನೂ ಧ್ವಂಸಗೊಳಿಸಿದ್ದಾರೆ ಎಂದು ಡಿಎಸ್‌‍ಪಿ ಮುರಳಿ ಕಷ್ಣ ದೃಢಪಡಿಸಿದ್ದಾರೆ.

ದುಷ್ಕರ್ಮಿಗಳ ಬಗ್ಗೆ ಮಾಹಿತಿ ಸಿಕ್ಕಿದ್ದು, ಅವರನ್ನು ಆದಷ್ಟು ಬೇಗ ಬಂಧಿಸಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದರೆ.

ಆಂಧ್ರ ಪ್ರದೇಶದ ವಿಧಾನ ಸಭಾ ಚುನಾವಣೆಯಲ್ಲಿ ಜಗನ್‌ ರೆಡ್ಡಿಯವರ ವೈಎಸ್‌‍ಆರ್‌ ಕಾಂಗ್ರೆಸ್‌‍ ಸೋತು ಸುಣ್ಣವಾಗಿದ್ದು, ತೆಲುಗುದೇಶಂ ಪಕ್ಷದ ಚಂದ್ರಬಾಬು ನಾಯ್ಡು ಆಳಿತ ನಡೆಸುತ್ತಿದ್ದಾರೆ. ಈ ಮಧ್ಯೆ ವೈಎಸ್‌‍ಆರ್‌ ಪ್ರತಿಮೆ ಹಾಗೂ ಟಿಡಿಪಿಯ ಧ್ರಜಸ್ತಂಭಕ್ಕೆ ಹಾನಿ ಚರ್ಚೆಗೆ ಗ್ರಾಸವಾಗಿದೆ.

ಮಾಜಿ ಮುಖ್ಯಮಂತ್ರಿ ಜಗನ್‌ಮೋಹನ್‌ ರೆಡ್ಡಿ ತಂದೆ ವೈ.ಎಸ್‌‍. ರಾಜಶೇಖರ ರೆಡ್ಡಿ 2004ರಿಂದ 2009ರವರೆಗೆ ಅವಿಭಜಿತ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದರು. 2009ರಲ್ಲಿ ಕರ್ನೂಲು ಬಳಿ ಸಂಭವಿಸಿದ್ದ ಹೆಲಿಕಾಪ್ಟರ್‌ ದುರಂತದಲ್ಲಿ ಮತಪಟ್ಟಿದ್ದರು.

Join Whatsapp
Exit mobile version