ನವದೆಹಲಿ : ಹೊಸ ಸಂಸತ್ ಭವನ ‘ಸೆಂಟ್ರಲ್ ವಿಸ್ತಾ’ದ ನಿರ್ಮಾಣ ಕಾಮಗಾರಿಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ದೆಹಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ) ಕಾಯ್ದೆಯಡಿ ಅಧಿಕಾರ ಚಲಾಯಿಸಿರುವುದು ಸರಿಯಿದೆ ಎಂದು ಕೋರ್ಟ್ ತಿಳಿಸಿದೆ.
ನ್ಯಾ. ದಿನೇಶ್ ಮಹೇಶ್ವರಿ, ನ್ಯಾ. ಎ.ಎಂ. ಖಾನ್ವಿಲ್ಕರ್ ಮತ್ತು ನ್ಯಾ. ಸಂಜೀವ್ ಖನ್ನಾ ನ್ಯಾಯಪೀಠ ಪ್ರಕರಣದ ವಿಚಾರಣೆ ನಡೆಸಿ ಈ ತೀರ್ಪು ನೀಡಿದೆ. ಪರಿಸರ ಸಮಿತಿಯ ಶಿಫಾರಸುಗಳು ಸೂಕ್ತವಾಗಿದೆ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ. ಪರಿಸರ ಸಚಿವಾಲಯದ ಪರಿಸರ ಅನುಮತಿಯ ಶಿಫಾರಸುಗಳು ಮಾನ್ಯ ಮತ್ತು ಸೂಕ್ತವಾಗಿವೆ ಎಂದು ಕೋರ್ಟ್ ತಿಳಿಸಿದೆ.
ಸೆಂಟ್ರಲ್ ವಿಸ್ತಾ ಪ್ರದೇಶದಲ್ಲಿ ಹೊಸ ಸಂಸತ್ ಭವನ, ಪ್ರಧಾನಿ, ಉಪರಾಷ್ಟ್ರಪತಿಗಳಿಗೆ ವಾಸಸ್ಥಾನವಿರುವ ಹೊಸ ವಸತಿ ಸಂಕೀರ್ಣ, ಜೊತೆಗೆ ಹಲವಾರು ಹೊಸ ಕಚೇರಿ ಕಟ್ಟಡಗಳು, ಕೇಂದ್ರ ಸಚಿವಾಲಯವನ್ನು ಒಳಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ಹೊಸ ಸಂಸತ್ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.