Home ಟಾಪ್ ಸುದ್ದಿಗಳು ಆಟವಾಡುತ್ತಿರುವಾಗ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ

ಆಟವಾಡುತ್ತಿರುವಾಗ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ

ಕೆ.ಆರ್.ಪುರ: ಆಟವಾಡುತ್ತಿದ್ದ ನಾಲ್ಕು ವರ್ಷದ ಮಗುವೊಂದು ಆಯತಪ್ಪಿ ನೀರಿನ ತೊಟ್ಟಿಗೆ ಬಿದ್ದು ಮೃತಪಟ್ಟ ಘಟನೆ ಕೆ.ಆರ್.ಪುರ ಸಮೀಪದ ದೇವಸಂದ್ರದಲ್ಲಿ ನಡೆದಿದೆ.

ಸುಬೀನಾ ಖಾಡ್ಕ(4) ಮೃತಪಟ್ಟ ಮಗು. ನೇಪಾಳದಿಂದ ನಗರಕ್ಕೆ ನಾಲ್ಕು ವರ್ಷಗಳ ಹಿಂದೆ ಬಂದು ದೇವಸಂದ್ರದಲ್ಲಿ ಬಾಡಿಗೆ ಮನೆ ಪಡೆದು ನೆಲೆಸಿದ್ದ ಕುಟುಂಬದ ಮಗು.

ಸೋಮವಾರ ಯೋಗಿಮಾನ್ ಬಹದ್ದೂರ್ ಕೂಲಿ ಕೆಲಸಕ್ಕೆ ತೆರಳಿದ್ದರು. ತಾಯಿ ಮನೆಯಲ್ಲೇ ಇದ್ದರು. ಸಂಜೆ 5.45ರ ಸುಮಾರಿಗೆ ತಾಯಿ ಮಗುವನ್ನು ಮನೆಯಲ್ಲೇ ಬಿಟ್ಟು ಅಂಗಡಿಗೆ ತೆರಳಿದ್ದರು. ಆಗ ಮಗು ಮನೆಯ ಹಿಂಭಾಗದಲ್ಲಿ ತೆರೆದಿದ್ದ ನೀರಿನ ಸಂಪ್‌ಗೆ ಬಿದ್ದು ಮೃತಪಟ್ಟಿದೆ ಎಂದು ಪೊಲೀಸರು ಹೇಳಿದ್ದಾರೆ.

‘ಹತ್ತು ನಿಮಿಷಗಳ ಬಳಿಕ ತಾಯಿ ಮನೆಗೆ ಬಂದಾಗ ಮಗು ಕಾಣಿಸಿರಲಿಲ್ಲ. ಹುಡುಕಾಟ ನಡೆಸಿದ್ದಾರೆ. ನೀರಿನ ಸಂಪು ಪರಿಶೀಲಿಸಿದಾಗ ಮಗುವಿನ ಮೃತದೇಹ ತೇಲುತ್ತಿತ್ತು’ ಎಂದು ಪೊಲೀಸರು ಹೇಳಿದರು.

ನೀರಿನ ತೊಟ್ಟಿಯನ್ನು ಸರಿಯಾಗಿ ಮುಚ್ಚದಿರುವುದೆ ಘಟನೆಗೆ ಕಾರಣ ಎನ್ನಲಾಗಿದೆ ಎಂದು ಪೊಲೀಸರು ಹೇಳಿದರು.

ಕೆ.ಆರ್.ಪುರ ಠಾಣೆಯಲ್ಲಿ ಪೊಲೀಸರು ದಾಖಲಾಗಿದೆ.

Join Whatsapp
Exit mobile version