Home ಟಾಪ್ ಸುದ್ದಿಗಳು ಪುರಿ ಜಗನ್ನಾಥನೇ ಮೋದಿ ಭಕ್ತ: ಬಿಜೆಪಿ ನಾಯಕ ಸಂಬಿತ್‌ ಪಾತ್ರಾ ಕ್ಷಮೆಯಾಚನೆ

ಪುರಿ ಜಗನ್ನಾಥನೇ ಮೋದಿ ಭಕ್ತ: ಬಿಜೆಪಿ ನಾಯಕ ಸಂಬಿತ್‌ ಪಾತ್ರಾ ಕ್ಷಮೆಯಾಚನೆ

ಪ್ರಾಯಶ್ಚಿತವಾಗಿ 3 ದಿನ ಉಪವಾಸ ಘೋಷಣೆ

ಭವನೇಶ್ವರ: ಪುರಿ ಜಗನ್ನಾಥನೇ ಮೋದಿ ಭಕ್ತ ಎಂದು ಹೇಳಿದ್ದ ಬಿಜೆಪಿ ನಾಯಕ ಸಂಬಿತ್‌ ಪಾತ್ರಾ ತಮ್ಮ ಹೇಳಿಕೆಗಾಗಿ ಕ್ಷಮೆ ಯಾಚಿಸಿದ್ದಾರೆ. ಅಲ್ಲದೆ, ಈ ಹೇಳಿಕೆಗೆ ಪ್ರಾಯಶ್ಚಿತ್ತವಾಗಿ 3 ದಿನ ಉಪವಾಸ ವ್ರತ ಕೈಗೊಳ್ಳುತ್ತಿರುವುದಾಗಿ ಘೋಷಿಸಿದ್ದಾರೆ.

ಪಾತ್ರಾ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದ್ದಂತೆ, ನನ್ನ ತಪ್ಪಿಗಾಗಿ ಪ್ರಾಯಶ್ಚಿತ್ತ ಕೈಗೊಳ್ಳಲು 3 ದಿನ ಉಪವಾಸ ಕೈಗೊಳ್ಳಲಿದ್ದೇನೆ. ಕ್ಷಮೆ ಕೇಳುತ್ತಿದ್ದೇನೆ ಎಂದಿದ್ದಾರೆ.

ಪಾತ್ರಾ ಏನಾದರೂ ಕಾಂಗ್ರೆಸ್‌ನಲ್ಲಿದ್ದಿದ್ದರೆ ಕೋಟ್ಯಂತರ ಭಕ್ತರ ಭಾವನೆಗಳೊಂದಿಗೆ ಆಟವಾಡಿದ್ದಕ್ಕೆ ಅವರನ್ನು ಕೂಡಲೇ ಉಚ್ಚಾಟಿಸುತ್ತಿದ್ದೆವು ಎಂದು ಕಾಂಗ್ರೆಸ್‌ ವಕ್ತಾರ ಪವನ್‌ ಖೇರಾ ಹೇಳಿದ್ದಾರೆ. ಜತೆಗೆ, ಪ್ರಧಾನಿ ಮೋದಿಯವರೂ ಜಗನ್ನಾಥನ ಭಕ್ತರ ಕ್ಷಮೆ ಯಾಚಿಸಬೇಕು ಎಂದೂ ಅವರು ಆಗ್ರಹಿಸಿದ್ದಾರೆ.

Join Whatsapp
Exit mobile version