Home ಟಾಪ್ ಸುದ್ದಿಗಳು ಉ.ಪ್ರ. : ಶಾಲಾ ಪರೀಕ್ಷೆ ಶುಲ್ಕ ಪಾವತಿಸಲಾಗದ ದಲಿತ ವಿದ್ಯಾರ್ಥಿನಿಯ ಆತ್ಮಹತ್ಯೆ

ಉ.ಪ್ರ. : ಶಾಲಾ ಪರೀಕ್ಷೆ ಶುಲ್ಕ ಪಾವತಿಸಲಾಗದ ದಲಿತ ವಿದ್ಯಾರ್ಥಿನಿಯ ಆತ್ಮಹತ್ಯೆ

ಲಖನೌ : ಶಾಲಾ ಪರೀಕ್ಷೆ ಶುಲ್ಕ ಪಾವತಿಸಲು ಸಾಧ್ಯವಾಗದೆ ದಲಿತ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ. ಉತ್ತರ ಪ್ರದೇಶದ ಬಾಂದಾ ಜಿಲ್ಲೆಯ ಬಾಬೆರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಡಿ.21ರಂದು ಶಾಲೆಯಲ್ಲಿ ತನ್ನ ಅರ್ಧ ವಾರ್ಷಿಕ ಪರೀಕ್ಷೆ ಬರೆಯಲು ಅವಕಾಶ ನೀಡದಿದ್ದುದಕ್ಕೆ ಬಾಲಕಿ ಖಿನ್ನತೆಗೊಳಗಾಗಿದ್ದಳು. ವಿದ್ಯಾರ್ಥಿನಿ ಶುಲ್ಕ ಪಾವತಿಸದ ಕಾರಣ, ಆಕೆಗೆ ಪರೀಕ್ಷೆ ಬರೆಯಲು ಅವಕಾಶ ನೀಡಿರಲಿಲ್ಲ ಎನ್ನಲಾಗಿದೆ.

ಬಾಲಕಿಯ ತಂದೆ ನೀಡಿರುವ ದೂರಿನಲ್ಲಿ, ತಮ್ಮ ಮಗಳ ಸಾವಿಗೆ ಶಾಲಾಡಳಿತವನ್ನು ಹೊಣೆಯಾಗಿಸಿದ್ದಾರೆ. ಈ ಸಂಬಂಧ ಎಫ್ ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.  

Join Whatsapp
Exit mobile version