Home ಟಾಪ್ ಸುದ್ದಿಗಳು ಕೆನಡಾದಲ್ಲಿ ಭಾರತದ ವಿವಾದಾತ್ಮಕ ಕಾನೂನುಗಳ ಪ್ರತಿ ಸುಟ್ಟು ಹಾಕಿದ ಅನಿವಾಸಿ ಭಾರತೀಯರು

ಕೆನಡಾದಲ್ಲಿ ಭಾರತದ ವಿವಾದಾತ್ಮಕ ಕಾನೂನುಗಳ ಪ್ರತಿ ಸುಟ್ಟು ಹಾಕಿದ ಅನಿವಾಸಿ ಭಾರತೀಯರು

ನವದೆಹಲಿ : ಅಮೆರಿಕದ ನಾಗರಿಕ ಹಕ್ಕುಗಳ ಚಳವಳಿಯ ನಾಯಕ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ 92ನೇ ಜನ್ಮದಿನದ ಹಿನ್ನೆಲೆಯಲ್ಲಿ, ಕೆನಡಾದ ಸುರ್ರೆಯ ಭಾರತೀಯ ಪಾಸ್ ಪೋರ್ಟ್ ಮತ್ತು ವೀಸಾ ಕಚೇರಿ ಮುಂದೆ ಗುಂಪೊಂದು ಭಾರತದ ವಿವಾದಾತ್ಮಕ ಕಾನೂನುಗಳನ್ನು ಸುಟ್ಟು ಹಾಕಿದ ಘಟನೆ ನಡೆದಿದೆ.

ನೂತನ ಕೃಷಿ ಕಾನೂನು, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಮುಂತಾದ ವಿವಾದಾತ್ಮಕ ಕಾನೂನುಗಳ ಪ್ರತಿಗಳನ್ನು ಸುಡಲಾಗಿದೆ. ಬಹುತ್ವ ಭಾರತದ ವಿದೇಶಿ ಭಾರತೀಯರು ಸಂಘಟನೆಯ ಸದಸ್ಯರು ಈ ಪ್ರತಿಭಟನೆ ಹಮ್ಮಿಕೊಂಡಿದ್ದರು.

ಜನಾಂಗೀಯ ಭೇದದ ವಿರುದ್ಧ ಹೋರಾಡುವ ವೇಳೆ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅನ್ಯಾಯದ ಕಾನೂನುಗಳನ್ನು ವಿರೋಧಿಸಿದ್ದುದರಿಂದ, ಅವರ ಜನ್ಮದಿನದ ಹಿನ್ನೆಲೆಯಲ್ಲಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

Join Whatsapp
Exit mobile version