Home ಟಾಪ್ ಸುದ್ದಿಗಳು ಮಾನ್ಸೂನ್ ಆಫರ್; 100 ಶಾಸಕರನ್ನು ಕರೆತನ್ನಿ, ಸರ್ಕಾರ ರಚಿಸಿ: ಬಿಜೆಪಿ ಬಿರುಕಿನ ಬಗ್ಗೆ ಅಖಿಲೇಶ್ ಪೋಸ್ಟ್!

ಮಾನ್ಸೂನ್ ಆಫರ್; 100 ಶಾಸಕರನ್ನು ಕರೆತನ್ನಿ, ಸರ್ಕಾರ ರಚಿಸಿ: ಬಿಜೆಪಿ ಬಿರುಕಿನ ಬಗ್ಗೆ ಅಖಿಲೇಶ್ ಪೋಸ್ಟ್!

ಲಕ್ನೋ: ಉತ್ತರ ಪ್ರದೇಶ ಬಿಜೆಪಿಯಲ್ಲಿ ಬಿರುಕು ಮೂಡಿದೆ ಎಂಬ ಊಹಾಪೋಹಗಳ ನಡುವೆ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಗುರುವಾರ ತಮ್ಮ ಎಕ್ಸ್ನಲ್ಲಿ ಬರೆದು ಕೊಂಡಿರುವ ವಿಷಯ ಹಲವರ ನಿದ್ದೆಗೆಡುವಂತೆ ಮಾಡಿದೆ.


ರಾಜ್ಯದಲ್ಲಿ ಹೊಸ ಸರ್ಕಾರ ರಚಿಸಲು ಆಡಳಿತ ಪಕ್ಷದ ಶಾಸಕರನ್ನು ಪಕ್ಷ ಬದಲಾಯಿಸುವಂತೆ ಹೇಳಲಾಗುತ್ತಿದೆ ಎನ್ನಲಾಗುತ್ತಿದೆ. ಹೀಗಾಗಿ ಮಾನ್ಸೂನ್ ಆಫರ್: ನೂರು ತನ್ನಿ, ಸರ್ಕಾರ ರಚಿಸಿ ಎಂದು ಅಖಿಲೇಶ್ ಪೋಸ್ಟ್ ಮಾಡಿದ್ದಾರೆ.

ಅಖಿಲೇಶ್ ಯಾದವ್ ಅವರು ತಮ್ಮ ಪೋಸ್ಟ್ ನಲ್ಲಿ ಯಾರನ್ನೂ ಹೆಸರಿಸದಿದ್ದರೂ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಅತೃಪ್ತಗೊಂಡು ಬಿಜೆಪಿ ತೊರೆಯಲು ಸಿದ್ದರಾಗಿರುವವರಿಗೆ ಇದು ಸಂದೇಶವಾಗಿದೆ ಎಂದು ಎಸ್ ಪಿಯ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ. 2022 ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ 111 ಸ್ಥಾನಗಳನ್ನು ಗೆದ್ದಿದೆ. ನಮಗೆ 100 ಅತೃಪ್ತ ಬಿಜೆಪಿ ಶಾಸಕರ ಬೆಂಬಲ ಸಿಕ್ಕರೆ, ನಾವು ಸುಲಭವಾಗಿ ಸರ್ಕಾರ ರಚಿಸುತ್ತೇವೆ” ಎಂದು ಎಸ್ ಪಿ ನಾಯಕ ವಿವರಿಸಿದರು.

Join Whatsapp
Exit mobile version