Home ಟಾಪ್ ಸುದ್ದಿಗಳು ರಾಹುಲ್ ಗಾಂಧಿ ಚಿತ್ರವನ್ನು ವಿರೂಪಗೊಳಿಸಿದ ಬಿಜೆಪಿ ಐಟಿ ಸೆಲ್ !

ರಾಹುಲ್ ಗಾಂಧಿ ಚಿತ್ರವನ್ನು ವಿರೂಪಗೊಳಿಸಿದ ಬಿಜೆಪಿ ಐಟಿ ಸೆಲ್ !

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ಜನಮನ್ನಣೆ ಪಡೆಯುತ್ತಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ರಾಹುಲ್ ಗಾಂಧಿಯ ವಯಸ್ಸಾದಂತೆ ಕಾಣುವ ಫೋಟೋವನ್ನು ಹಂಚಿಕೊಳ್ಳಲಾಗಿದ್ದು, ಇದು ಬಿಜೆಪಿ ಐಟಿ ಸೆಲ್ ಮಾಡಿರುವ ಕುತಂತ್ರ ಎಂದು ನೆಟ್ಟಿಗರು ದೂರಿದ್ದಾರೆ.


“ಫೋಟೋದಲ್ಲಿ ರಾಹುಲ್ ಗಾಂಧಿ ಹೆಚ್ಚು ವಯಸ್ಸಾದಂತೆ ಕಾಣುತ್ತಿದ್ದು, ಯಂಗ್ ಆಗಿ ಕಾಣಲು ಏನೆಲ್ಲ ಕಸರತ್ತು ಮಾಡುತ್ತಿದ್ದಾರೆ, ಆದರೆ ಇದು ಫಲಿಸುವುದಿಲ್ಲ” ಎಂದು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಈ ವೈರಲ್ ಫೋಟೋವನ್ನು ಎಡಿಟ್ ಮಾಡಲಾಗಿದೆ ಎಂದು ನೆಟ್ಟಿಗರು ದೂರಿದ್ದಾರೆ.


ಅ. 18, 2022 ರಂದು ಕಾಂಗ್ರೆಸ್ ಅಧಿಕೃತ ಖಾತೆಯಲ್ಲಿ ಅಸಲಿ ಫೋಟೋವನ್ನು ಹಂಚಲಾಗಿದ್ದು, ಅದೇ ಫೋಟೊಗೆ ಹೆಚ್ಚು ಗಡ್ಡ ಹಾಗೂ ಮುಖವನ್ನು ವಯಸ್ಸಾದಂತೆ ಕಾಣುವ ಹಾಗೆ ಎಡಿಟ್ ಮಾಡಿ ಬಿಜೆಪಿ ಐಟಿ ಸೆಲ್ ಹರಿಯಬಿಟ್ಟಿದೆ ಎಂದು ತಿಳಿದು ಬಂದಿದೆ.

Join Whatsapp
Exit mobile version