ನವದೆಹಲಿ: ಎಎಪಿ ಬೆಳೆಯುತ್ತಿರುವುದರಿಂದ ಬಿಜೆಪಿ ಭಯಕ್ಕೆ ಬಿದ್ದಿದೆ. ನನ್ನನ್ನು ಗೂಢಚಾರಿಕೆಯಡಿ ಸಿಕ್ಕಿಸಲು ನೋಡುತ್ತಿರುವ ಅದರ ಯತ್ನವು ಬಿಜೆಪಿಯ ಬಲಹೀನತೆ ಮತ್ತು ಹೇಡಿತನದ ಸಂಕೇತವಾಗಿದೆ ಎಂದು ಬುಧವಾರ ಹಿಂದಿಯಲ್ಲಿ ದಿಲ್ಲಿ ಉಪ ಮುಖ್ಯಮಂತ್ರಿ ಮನೀಸ್ ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ.
ಕೇಂದ್ರ ಸಚಿವಾಲಯದ ಮುಖ್ಯ ಕಾರ್ಯದರ್ಶಿಯು ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ಜೊತೆ ನಡೆಸಿರುವ ಸಂವಹನದಲ್ಲಿ ಸಿಸೋಡಿಯಾರನ್ನು ಗೂಢಚಾರಿಕೆಯಡಿ ಬಂಧಿಸಲು, 1988ರ ಭ್ರಷ್ಟಾಚಾರ ತಡೆ ಕಾಯ್ದೆಯ 17ನೇ ವಿಧಿಯಡಿ ಬಂಧಿಸಲು ಸೂಚಿಸಿರುವ ವಿಷಯ ಸೋರಿಕೆಯಾಗಿದೆ.
“ಎದುರು ಪಕ್ಷದವರೊಬ್ಬರ ಮೇಲೆ ಏನಾದರೊಂದು ಮೊಕದ್ದಮೆ ಹಾಕುತ್ತಲೇ ಇರುವುದು ಅವರ ಬಲಹೀನತೆಯನ್ನು ಸೂಚಿಸುತ್ತದೆ. ಅದು ಅವರ ಹೇಡಿ ಕಾರ್ಯವೂ ಹೌದು. ಎಎಪಿ ಪಕ್ಷವು ಹೆಚ್ಚೆಚ್ಚು ಬೆಳೆದಂತೆ ನಮ್ಮ ಮೇಲೆ ಹೆಚ್ಚೆಚ್ಚು ಮೊಕದ್ದಮೆಗಳು ದಾಖಲಾಗುತ್ತಲೇ ಇರುತ್ತವೆ” ಎಂದು ಸಿಸೋಡಿಯಾ ಹೇಳಿದ್ದಾರೆ.
ರಾಜಕೀಯ ಪತ್ತೇದಾರಿಕೆ ಮೂಲಕ ಹೆಚ್ಚು ಭ್ರಷ್ಟ ಹಣವನ್ನು ಸಿಸೋಡಿಯಾ ಸೇರಿಸಿದ್ದಾರೆ ಎನ್ನುವುದು ಸಿಬಿಐನ ಎಫ್ ಬಿಯು ಘಟಕಕ್ಕೆ ಪತ್ತೆಯಾಗಿದೆಯೆಂದು, ಅದರ ಮೇಲೆ ಎಫ್ ಐಆರ್ ದಾಖಲಿಸಲು ಸೂಚಿಸಲಾಗಿದೆಯೆಂದು ತಿಳಿದು ಬಂದಿದೆ.