Home ಟಾಪ್ ಸುದ್ದಿಗಳು ಮುಸ್ಲಿಂ ಮಹಿಳೆಯರ ನಿಖಾಬ್ ತೆಗೆಸಿ ಗುರುತಿನ ಚೀಟಿ ಪರಿಶೀಲಿಸಿದ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ: ಪ್ರಕರಣ...

ಮುಸ್ಲಿಂ ಮಹಿಳೆಯರ ನಿಖಾಬ್ ತೆಗೆಸಿ ಗುರುತಿನ ಚೀಟಿ ಪರಿಶೀಲಿಸಿದ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ: ಪ್ರಕರಣ ದಾಖಲು

ಹೈದರಾಬಾದ್: ಮುಸ್ಲಿಂ ಮಹಿಳೆಯ ಮುಖ ತೋರಿಸುವಂತೆ ಒತ್ತಾಯಿಸಿ, ಬಳಿಕ, ಮತದಾರರ ಗುರುತಿನ ಚೀಟಿಯನ್ನು ಅವರಿಗೆ ಹೋಲಿಕೆ ಮಾಡುವ ಮೂಲಕ ಹೈದರಾಬಾದ್ ನ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ.

ಈ ಸಂಬಂಧ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ವಿರುದ್ಧ ಐಪಿಸಿ ಸೆಕ್ಷನ್ 171ಸಿ, 186, 505(1)(ಸಿ) ಮತ್ತು ಪ್ರಜಾ ಪ್ರತಿನಿಧಿ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿದೆ.


ಅಮೃತ ವಿದ್ಯಾಲಯದಲ್ಲಿ ತಮ್ಮ ಮತದಾನಗೈದ ನಂತರ ಮಾಧವಿ ಲತಾ ಹಲವು ಮತಗಟ್ಟೆಗಳಿಗೆ ಭೇಟಿ ನೀಡಿದ್ದರು. ಆಝಂಪುರ್ ಎಂಬಲ್ಲಿನ ಮತಗಟ್ಟೆಯಲ್ಲಿ ಆಕೆ ಮತದಾನಕ್ಕೆ ಕಾದಿದ್ದ ಮಹಿಳೆಯರ ಐಡಿ ಕಾರ್ಡ್ ಪರಿಶೀಲಿಸಿ ಬುರ್ಖಾಧಾರಿ ಮಹಿಳೆಯರಿಗೆ ಮುಖ ತೋರಿಸುವಂತೆ ಹೇಳುವುದು ಹಾಗೂ ಐಡಿ ಕಾರ್ಡ್ಗಳನ್ನು ಸರಿಯಾಗಿ ಪರಿಶೀಲಿಸಿದ ನಂತರವೇ ಮತದಾನಕ್ಕೆ ಅನುಮತಿಸಬೇಕೆಂದೂ ಅವರು ಚುನಾವಣಾಧಿಕಾರಿಗಳಿಗೆ ಸೂಚಿಸುವುದು ವಿಡಿಯೋದಲ್ಲಿ ಕಾಣಿಸುತ್ತದೆ.

Join Whatsapp
Exit mobile version