Home ಟಾಪ್ ಸುದ್ದಿಗಳು ಪೆನ್ ಡ್ರೈವ್ ಕೇಸ್ ನಲ್ಲಿ ಬಂಧನ ಆಗಿರುವುದು ನನ್ನ ಪಿಎ ಅಲ್ಲ: ಪ್ರೀತಂಗೌಡ ಸ್ಪಷ್ಟನೆ

ಪೆನ್ ಡ್ರೈವ್ ಕೇಸ್ ನಲ್ಲಿ ಬಂಧನ ಆಗಿರುವುದು ನನ್ನ ಪಿಎ ಅಲ್ಲ: ಪ್ರೀತಂಗೌಡ ಸ್ಪಷ್ಟನೆ

ಬೆಂಗಳೂರು: ಪೆನ್ ಡ್ರೈವ್ ಕೇಸ್ ನಲ್ಲಿ ಬಂಧನ ಆಗಿರುವುದು ನನ್ನ ಪಿಎ ಅಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಸ್ಪಷ್ಟನೆ ನೀಡಿದ್ದಾರೆ.


ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಾಸನದಲ್ಲಿ 2 ಲಕ್ಷ ಮೊಬೈಲ್ ಇದ್ದರೆ ಎಲ್ಲ ಮೊಬೈಲ್ ನಲ್ಲೂ ಇರುತ್ತೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಯಾಕೆಂದರೆ ಯಾರು ಬೇಕು ಅಂತಾ ತರಿಸಿಕೊಂಡಿರುವುದಿಲ್ಲ. ನನ್ನ ಕಚೇರಿಯಲ್ಲಿ 40-50ಕ್ಕಿಂತ ಹೆಚ್ಚು ಜನ ಕೆಲಸ ಮಾಡುತ್ತಾರೆ. ಒಬ್ಬ ಪೆನ್ ಡ್ರೈವ್ನಲ್ಲಿ ಹಾಕಿ ನೋಡಿದರೆ ಅಪರಾಧ ಅಂದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.


ಎಸ್ ಐಟಿ ಇದೇ ಮಾನದಂಡದಲ್ಲಿ ತನಿಖೆ ಮಾಡುತ್ತದೆ ಅಂತಾದರೆ ಜಿಲ್ಲೆಯಲ್ಲಿ 15 ಲಕ್ಷ ಮೊಬೈಲ್ ಬಳಕೆದಾರರು ತಪ್ಪಿತಸ್ಥರಾಗುತ್ತಾರೆ. ನಮ್ಮ ಕಚೇರಿಯಲ್ಲಿ ಸಂಬಳಕ್ಕೆ ಕೆಲಸ ಮಾಡುವವರು ಇದ್ದಾರೆ. ವಾಲಂಟರಿಯಾಗಿ ಕೆಲಸ ಮಾಡುವವರೂ ಇದ್ದಾರೆ. ಏಪ್ರಿಲ್ 23ರಂದು ಲಾಯರ್ ಪೆನ್ ಡ್ರೈವ್ ತಂದು ಕೊಟ್ಟಿದ್ದಾರೆ. ಹಾಗಂತ ಲಾಯರ್ ಮೇಲೆ ಕೇಸ್ ದಾಖಲಿಸಲು ಆಗುತ್ತಾ ಎಂದಿದ್ದಾರೆ. ನಾನು ಯಾರಿಗೂ ವಕ್ತಾರ ಆಗಲು ರೆಡಿ ಇಲ್ಲ. ಸಂತ್ರಸ್ತರ ವಿಡಿಯೋ ಹರಿಬಿಡಬಾರದು ಎಂಬುದೇ ನನ್ನ ನಿಲುವು ಎಂದು ಹೇಳಿದ್ದಾರೆ.

Join Whatsapp
Exit mobile version