Home ರಾಷ್ಟ್ರೀಯ ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿದೆ ದ್ವಿಚಕ್ರ ವಾಹನಗಳ ಮಾರಾಟ

ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿದೆ ದ್ವಿಚಕ್ರ ವಾಹನಗಳ ಮಾರಾಟ

ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿರುವ ಬಳಕೆಯಿಂದಾಗಿ ಭಾರತದಲ್ಲಿ ದ್ವಿಚಕ್ರ ವಾಹನಗಳ ಬಳಕೆ ವರ್ಷದಿಂದ ವರ್ಷಕ್ಕೆ ಏರುತ್ತಿದೆ.


ಈ ಸೆಪ್ಟೆಂಬರ್ ತಿಂಗಳಲ್ಲಿ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಶೇ.22ರಷ್ಟು ಮತ್ತು ತ್ರಿಚಕ್ರ ವಾಹದಲ್ಲಿ ಸುಮಾರು ಶೇ.8ರಷ್ಟು ಏರಿಕೆ ಕಂಡಿದೆ ಎಂದು ಬಿಎನ್ ಪಿ ಪರಿಬಾಸ್ ಇಂಡಿಯಾ ವರದಿ ಮಾಡಿದೆ.
ಇನ್ನು ಇದು ರಿಟೈಲ್ ಮಾರುಕಟ್ಟೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ಈ ಹಬ್ಬದ ಋತುವಿನಲ್ಲಿ ಇನ್ನಷ್ಟು ಹೆಚ್ಚು ಮಾರಾಟವಾಗಬಹುದೆಂದು ಒರಿಜಿನಲ್ ಎಕ್ಯುಪ್ಮೆಂಟ್ ಮ್ಯಾನುಫ್ಯಾಕ್ಟರ್ಸ್ (OEMs) ಭರವಸೆ ಇಟ್ಟುಕೊಂಡಿದ್ದಾರೆ. ಇನ್ನು ಟ್ರ್ಯಾಕ್ಟರ್ ಮಾರಾಟಗಳಲ್ಲಿ ವರ್ಷದಿಂದ ವರ್ಷಕ್ಕೆ ಸ್ಥಿರ ಬೆಳವಣಿಗೆ ಕಂಡು ಬಂದಿದೆ. ಆದರೆ, ಆರ್ಥಿಕ ವರ್ಷ 2025ರಲ್ಲಿ ಈ ಬೆಳವಣಿಗೆ ಏರಳಿತ ಕಾಣಬಹುದೆಂಬ ಆತಂಕ ವ್ಯಕ್ತಪಡಿಸಲಾಗುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.


ಪ್ರಧಾನ್ ಮಂತ್ರಿ ಜನ್ ಧನ್ ಯೋಜನೆ (PMJDY)ಯಿಂದಾಗಿ ಗ್ರಾಮೀಣ ಮತ್ತು ನಗರ ಪಟ್ಟಣಗಳಲ್ಲಿ ದ್ವಿಚಕ್ರ ವಾಹನಗಳ ಬಳಕೆ ಹೆಚ್ಚುತ್ತಿದೆ. ಗ್ರಾಮೀಣ ಮತ್ತು ನಗರ ಭಾಗಗಳಲ್ಲಿ ಲೋನ್ ಪಡೆದು ದ್ವಿಚಕ್ರ ವಾಹನಗಳ ಮಾರಾಟ ಹೆಚ್ಚುತ್ತಿದೆ. ಗ್ರಾಮೀಣ ಭಾಗದಲ್ಲಿ ದ್ವಿಚಕ್ರ ವಾಹನವನ್ನು ಶೇ. 62ರಷ್ಟು ಮತ್ತು ನಗರ ಭಾಗದಲ್ಲಿ ಶೇಕಡ 58ರಷ್ಟು ಖರೀದಿಯಾಗಿದೆ ಎಂದು ವರದಿ ಉಲ್ಲೇಖಿಸಿದೆ.

Join Whatsapp
Exit mobile version