ಭಾರೀ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಬಿ. ಕೆ. ಹರಿಪ್ರಸಾದ್ ಭೇಟಿ; ವೈಯಕ್ತಿಕ ಪರಿಹಾರ ಧನ ವಿತರಣೆ

Prasthutha|

ಮಂಗಳೂರು: ವಿಧಾನಪರಿಷತ್ ವಿಪಕ್ಷ ನಾಯಕ ಬಿ. ಕೆ. ಹರಿಪ್ರಸಾದ್, ಇತ್ತೀಚೆಗೆ ಸುರಿದ ಭಾರಿ ಮಳೆಗೆ ಪ್ರಾಕೃತಿಕ ತೊಂದರೆಗೆ ಒಳಗಾದ ಇಂದು ಮಂಗಳೂರಿನ ಉರ್ವಾ ಸ್ಟೋರ್ ಸುಂಕದಕಟ್ಟೆ ಹಾಗೂ ಕಣ್ಣೂರ್ ವಾರ್ಡಿನ ಬಳ್ಳೂರು ಗುಡ್ಡೆ ಪ್ರದೇಶಕ್ಕೆ ಇಂದು   ಭೇಟಿ ನೀಡಿ ಮಳೆಯಿಂದ ಸಂತ್ರಸ್ತರಾದವರಿಗೆ ಸಾಂತ್ವನ ಹೇಳಿದರು.

- Advertisement -

ಈ ಸಂದರ್ಭದಲ್ಲಿ ಅವರು ಮಾತನಾಡಿ, ಮಂಗಳೂರು ಭಾಗದಲ್ಲಿ ಸುರಿದ ವಿಪರೀತ ಮಳೆಯಿಂದಾಗಿ ಹಲವಾರು ಕಡೆ ಜನರಿಗೆ ಬಹಳಷ್ಟು ತೊಂದರೆಯಾಗಿದೆ. ಮನೆಗಳು ಕುಸಿದು ಜನರು ಸಂಬಧಿಕರ ಮನೆಗಳಲ್ಲಿ ವಾಸಮಾಡುವಂತಹ ಸ್ಥಿತಿ ಉಂಟಾಗಿದೆ. ಗುಡ್ಡೆಕುಸಿದು ಜನರು ಮನೆಗಳನ್ನು ಬಿಟ್ಟು ಬೇರೆ ಕಡೆ ಆಶ್ರಯಿಸುವಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸರಕಾರ ಹಾಗೂ ಮಂಗಳೂರು ಮಹಾನಗರ ಪಾಲಿಕೆ ಸರಿಯಾದ ಕ್ರಮ ಕೈಗೊಳ್ಳಬೇಕು. ಸಂತ್ರಸ್ತರಿಗೆ ಇನ್ನೂ ಪರಿಹಾರ ಧನ ಕೈ ಸೇರಿಲ್ಲ. ಶೀಘ್ರದಲ್ಲಿ ತೊಂದರೆಯಾದವರಿಗೆ ಪುನರ್ ವಸತಿ ಸೌಕರ್ಯ ಕಲ್ಪಿಸಬೇಕು ಎಂದರು.

ಹರಿಪ್ರಸಾದ್ ಅವರು ಸುಂಕದಕಟ್ಟೆಯ ಮನೆ ಕಳೆದುಕೊಂಡ ಸಂತ್ರಸ್ತ ಪದ್ಮಾವತಿಯವರಿಗೆ ತನ್ನ ವೈಯಕ್ತಿಕ ನೆಲೆಯಲ್ಲಿ ಸಹಾಯ ಧನ ನೀಡಿದರು.

- Advertisement -

ಇದೇ ಸಂದರ್ಭದಲ್ಲಿ ಅವರು ಪಡೀಲ್ ರೈಲ್ವೆ ಅಂಡರ್ ಪಾಸ್ ಬಳಿ ಮತ್ತು ಅಳಪೆ ರಾಷ್ಟ್ರೀಯ ಹೆದ್ದಾರಿ ರೈಲ್ವೆ ಅಂಡರ್ ಪಾಸ್ ಬಳಿ ಭೇಟಿ ನೀಡಿ ಅಲ್ಲಿ ಮಳೆಗಾಲದಲ್ಲಿ ನೀರು ನಿಂತು ಜನರಿಗೆ ತೊಂದರೆಯಾಗುವುದನ್ನು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಜೆ. ಆರ್. ಲೋಬೊ, ಕಾರ್ಪೊರೇಟರ್ ಗಳಾದ ಶಶಿಧರ್ ಹೆಗ್ಡೆ, ಅಬ್ದುಲ್ ರವೂಫ್, ಆಶ್ರಫ್ ಬಜಾಲ್, ಪಕ್ಷದ ಮುಖಂಡರಾದ ಪ್ರಕಾಶ್ ಸಾಲ್ಯಾನ್, ಅಬ್ದುಲ್ ಸಲಿಂ, ಲುಕ್ಮಾನ್ ಬಂಟ್ವಾಳ, ಟಿ. ಕೆ. ಸುಧೀರ್, ಚಿತ್ತರಂಜನ್ ಶೆಟ್ಟಿ, ರಫೀಕ್ ಕಣ್ಣೂರ್, ಸೇಸಮ್ಮ, ಭರತೇಶ್ ಅಮೀನ್, ಚೇತನ್ ಕುಮಾರ್, ಮಲ್ಲಿಕಾರ್ಜುನ, ರೂಪ ಚೇತನ್,ಶರೀಫ್, ರಮಾನಂದ್ ಪೂಜಾರಿ, ತಮ್ಮಣ್ಣ, ರೋಬಿನ್, ಲಕ್ಷ್ಮಣ್ ಶೆಟ್ಟಿ, ಶಾನ್ ಡಿಸೋಜಾ, ಹುಸೈನ್,ಮೊದಲಾದವರು ಉಪಸ್ಥಿತರಿದ್ದರು.

Join Whatsapp
Exit mobile version