Home ಟಾಪ್ ಸುದ್ದಿಗಳು ಶಿಕ್ಷಣ ಇಲಾಖೆ, ಶಾಲೆಯ ನಿರ್ಲಕ್ಷ್ಯ: ಅಲ್ಪಸಂಖ್ಯಾತರ ವಿದ್ಯಾರ್ಥಿಗಳು ಮತ್ತು ಪೋಷಕರ ಪರದಾಟ

ಶಿಕ್ಷಣ ಇಲಾಖೆ, ಶಾಲೆಯ ನಿರ್ಲಕ್ಷ್ಯ: ಅಲ್ಪಸಂಖ್ಯಾತರ ವಿದ್ಯಾರ್ಥಿಗಳು ಮತ್ತು ಪೋಷಕರ ಪರದಾಟ

ಉಳ್ಳಾಲ: ಶಿಕ್ಷಣ ಇಲಾಖೆ ಆಯೋಜಿಸಿದ್ದ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನಕ್ಕಾಗಿ ಆಧಾರ್ ಜೋಡನೆ ಮಾಡುವ ಕ್ಯಾಂಪ್ ಗೆ ಆಗಮಿಸಿದ ನೂರಾರು ವಿದ್ಯಾರ್ಥಿಗಳು ಮತ್ತು ಪೋಷಕರು ಪರದಾಡಿದ ಘಟನೆ ಉಳ್ಳಾಲದ ಹಝ್ರತ್ ಸಯ್ಯದ್ ಮದನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದಿದೆ.


ಮಂಗಳೂರು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮತ್ತು ಶಾಲೆಯವರು ನೀಡಿದ ಸೂಚನೆಯಂತೆ ನೂರಾರು ವಿದ್ಯಾರ್ಥಿಗಳು ಮತ್ತು ಪೋಷಕರು ಬೆಳಗ್ಗೆ 8 ಗಂಟೆಯಿಂದಲೇ ಉಳ್ಳಾಲದ ಮಾಸ್ತಿಕಟ್ಟೆ ಬಳಿಯಿರುವ ಸಯ್ಯದ್ ಮದನಿ ಆಂಗ್ಲ ಮಾಧ್ಯಮ ಶಾಲೆಗೆ ಬಂದಿದ್ದರು. ಆದರೆ ಮಧ್ಯಾಹ್ನದವರೆಗೆ ಯಾವುದೇ ಕ್ಯಾಂಪ್ ಆಯೋಜಿಸುವ ಬಗ್ಗೆ ಮಾಹಿತಿಯೇ ಇರಲಿಲ್ಲ. ಕ್ಯಾಂಪ್ ಬಗ್ಗೆ ಶಾಲೆಯ ಯಾರಲ್ಲೂ ಸರಿಯಾದ ಮಾಹಿತಿ ಇರಲಿಲ್ಲ. ಯಾರಿಗೂ ಕೇಳಿದರೂ ಸರಿಯಾದ ಉತ್ತರ ಸಿಕ್ಕಿರಲಿಲ್ಲ. ಗಂಟೆಗಳ ಕಾಲ ಶಾಲೆಯಲ್ಲಿ ಬಸವಳಿದ ವಿದ್ಯಾರ್ಥಿಗಳು ಮತ್ತು ಪೋಷಕರು ಶಿಕ್ಷಣ ಇಲಾಖೆಯ ನಿರ್ಲಕ್ಷ್ಯಕ್ಕೆ ಬೇಸತ್ತು ಸ್ಥಳದಲ್ಲೇ ಆಕ್ರೋಶ ವ್ಯಕ್ತಪಡಿಸಿದರು.


ಅಲ್ಪಸಂಖ್ಯಾತ ವಿದ್ಯಾರ್ಥಿ ವೇತನಕ್ಕಾಗಿ NSPಯಲ್ಲಿ ಆಧಾರ್ ಸೀಡಿಂಗ್ ಆಗದಿರುವ ಉಳ್ಳಾಲ ಮತ್ತು ಮಂಗಳೂರು ತಾಲೂಕು ವ್ಯಾಪ್ತಿಯ ಸರ್ಕಾರಿ/ಅನುದಾನಿತ/ಅನುದಾನ ರಹಿತ ಪ್ರಾಥಮಿಕ ಮತ್ತು ಫ್ರೌಡ ಶಾಲೆಯ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗಾಗಿ ದಿನಾಂಕ 8/7/2024ರಂದು ಹಝ್ರತ್ ಸಯ್ಯದ್ ಮದನಿ ಆಂಗ್ಲ ಮಾಧ್ಯಮ ಶಾಲೆ ಹಾಗೂ ಬಿಆರ್ ಸಿ ಕೇಂದ್ರ ಬೋಳಾರದಲ್ಲಿ ಆಧಾರ್ ಸೀಡಿಂಗ್ ಕ್ಯಾಂಪ್ ಆಯೋಜಿಸಿರುವ ಬಗ್ಗೆ ದಿನಾಂಕ 6/07/2024ರಂದು ಶಿಕ್ಷಣ ಇಲಾಖೆ ಸಂಬಂಧಪಟ್ಟ ಶಾಲೆಗಳಿಗೆ ಮಾಹಿತಿ ನೀಡಿತ್ತು.


ದಿನಾಂಕ 8/7/2024ರ ಸೋಮವಾರ ಬೆಳಿಗ್ಗೆ 10 ಗಂಟೆಯಿಂದ ಈ ಎರಡು ನಡೆಯುವ ಆಧಾರ್ ಸೀಡಿಂಗ್ ಕ್ಯಾಂಪ್ ಗೆ ಫಲಾನುಭವಿ ವಿದ್ಯಾರ್ಥಿಗಳು ಕಡ್ಡಾಯವಾಗಿ ಹಾಜರಾಗುವಂತೆ ಕ್ರಮ ವಹಿಸಲು ಶಿಕ್ಷಣೆ ಇಲಾಖೆ ಸೂಚಿಸಿತ್ತು. ಶಾಲೆಯವರು ನೀಡಿದ ಮಾಹಿತಿಯಂತೆ ಉಳ್ಳಾಲ ತಾಲೂಕು ವ್ಯಾಪ್ತಿಯ ಶಾಲೆಗಳ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಉಳ್ಳಾಲದ ಹಝ್ರತ್ ಸಯ್ಯದ್ ಮದನಿ ಆಂಗ್ಲ ಮಾಧ್ಯಮ ಶಾಲೆಗೆ ಬಂದಿದ್ದರು.

Join Whatsapp
Exit mobile version