Home ಟಾಪ್ ಸುದ್ದಿಗಳು ಉತ್ತರ ಪ್ರದೇಶದಲ್ಲಿ ವಧು-ವರರಾದ ಕಪ್ಪೆಗಳು: ಹಿಂದೂ ಮಹಾಸಭಾ ಸಂಘಟನೆಯ ಪೌರೋಹಿತ್ಯ !

ಉತ್ತರ ಪ್ರದೇಶದಲ್ಲಿ ವಧು-ವರರಾದ ಕಪ್ಪೆಗಳು: ಹಿಂದೂ ಮಹಾಸಭಾ ಸಂಘಟನೆಯ ಪೌರೋಹಿತ್ಯ !

ಗೋರಖ್ ಪುರ: ಉತ್ತರ ಪ್ರದೇಶದಲ್ಲಿ ಈ ಬಾರಿ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದ್ದು, ಮಳೆಗಾಗಿ ಪ್ರಾರ್ಥಿಸಿದ ಗೋರಖ್ ಪುರದ ಜನರು ಕಪ್ಪೆಗಳಿಗೆ ಮದುವೆ ಮಾಡುವ ಸಂಪ್ರದಾಯದ ಮೊರೆ ಹೋಗಿದ್ದಾರೆ.


ಗೋರಖ್ ಪುರದ ಕಾಳಿಬರಿ ದೇವಸ್ಥಾನದಲ್ಲಿ ಹಿಂದೂ ಮಹಾಸಭಾ ಸಂಘಟನೆಯು ಕಪ್ಪೆಗಳ ಮದುವೆಯ ಎಲ್ಲ ಕಾರ್ಯಗಳನ್ನು ನಿರ್ವಹಿಸಿದೆ.


ಬಳಿಕ ಮಾತನಾಡಿದ ಹಿಂದೂ ಮಹಾಸಭಾದ ರಮಾಕಾಂತ್ ವರ್ಮಾ, ಈ ಪ್ರದೇಶದಲ್ಲಿ ಬರಪೀಡಿತ ಸನ್ನಿವೇಶವಿದೆ. ಮಳೆಗಾಲವಾದರೂ, ಸಾಕಷ್ಟು ಮಳೆ ಸುರಿದಿಲ್ಲ. ಹೀಗಾಗಿ ಕಪ್ಪೆಗಳಿಗೆ ಮದುವೆ ಮಾಡಿಸಲಾಗಿದೆ ಎಂದು ಹೇಳಿದ್ದಾರೆ.

Join Whatsapp
Exit mobile version