Home ಟಾಪ್ ಸುದ್ದಿಗಳು ಅಂಬಾನಿ, ಅದಾನಿಗೆ ಮಾತ್ರ ಮಾಡಿದ ಬಜೆಟ್ ಆಗಿದೆ: ಪ್ರಿಯಾಂಕ್ ಖರ್ಗೆ ಕಿಡಿ

ಅಂಬಾನಿ, ಅದಾನಿಗೆ ಮಾತ್ರ ಮಾಡಿದ ಬಜೆಟ್ ಆಗಿದೆ: ಪ್ರಿಯಾಂಕ್ ಖರ್ಗೆ ಕಿಡಿ

ಬೆಂಗಳೂರು: ಕೇಂದ್ರ ಬಜೆಟ್ ಕೇವಲ ಅದಾನಿ-ಅಂಬಾನಿಗೆ ಮಾತ್ರ ಮಾಡಿದ ಬಜೆಟ್ ಆಗಿದ್ದು, ಹಮ್ ದೋ ಹಮಾರೆ ದೋ ಎಂಬ ಬಜೆಟ್ ಆಗಿದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.

ಈ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಜ್ಯಕ್ಕೆ ಬಹಳಷ್ಟು ಹಣ ಸುರಿದು ಬರುತ್ತೆ ಅಂತಿದ್ದರು. ಆದರೆ, ಇಂದು ಬಜೆಟ್ ನಲ್ಲಿ ಏನೂ ಬಂದಿಲ್ಲ. ನಿರ್ಮಲಾ ಸೀತಾರಾಮನ್ ಕರ್ನಾಟಕದಿಂದ ಆಯ್ಕೆಯಾದವರು. ಇನ್ನೂ ಮೂರು ನಾಲ್ಕು ಬಜೆಟ್ ಆಗಿ ಹೋಗಿದೆ. ಆದರೆ, ರಾಜ್ಯದ ಆಸೆ, ಆಕಾಂಕ್ಷೆ ಏನು ಅನ್ನೋದು ಅವರಿಗೆ ಗೊತ್ತಾಗಿಲ್ಲ ಎಂದು ಹೇಳಿದ್ದಾರೆ. ನಮ್ಮವರೇ ಸಂಸದರು ಇದ್ದಾರೆ. ನಮ್ಮವರೇ ಆದ ಹಣಕಾಸು ಸಚಿವೆ ಇದ್ದಾರೆ. ಏನಾದರು ಪ್ರಭಾವ ಬೀರಿ ರಾಜ್ಯಕ್ಕೆ ಏನಾದರು ತರುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ, ಏನೂ ಆಗಿಲ್ಲ. ಕನ್ನಡಿಗರ ಆಸೆಯನ್ನು ಮೋದಿಯವರ ಮುಂದೆ ಹೇಳಲು ಏಕೆ ಹೆದರುತ್ತಾರೆ ಅನ್ನೋದು ಗೊತ್ತಿಲ್ಲ. ನಮ್ಮ ಎಂಪಿಗಳು ಅಷ್ಟು ಅಸಮರ್ಥರಾ?. ಅಷ್ಟು ಹೆದರಿಕೆ ಇದೆಯಾ? ಎಂದು ವಾಗ್ದಾಳಿ ನಡೆಸಿದ್ದಾರೆ.

Join Whatsapp
Exit mobile version