Home ಟಾಪ್ ಸುದ್ದಿಗಳು ಕೋವಿಡ್ 19 ಎಫೆಕ್ಟ್ | ಸೌದಿಗೆ ಪ್ರಯಾಣಿಸಿ ಯುಎಇಯಲ್ಲಿ ಸಿಲುಕಿರುವ ಭಾರತೀಯರನ್ನು ಹಿಂದಿರುಗುವಂತೆ ಸೂಚನೆ

ಕೋವಿಡ್ 19 ಎಫೆಕ್ಟ್ | ಸೌದಿಗೆ ಪ್ರಯಾಣಿಸಿ ಯುಎಇಯಲ್ಲಿ ಸಿಲುಕಿರುವ ಭಾರತೀಯರನ್ನು ಹಿಂದಿರುಗುವಂತೆ ಸೂಚನೆ

ನವದೆಹಲಿ : ಸೌದಿ ಅರೇಬಿಯಾ ಮತ್ತು ಕುವೈತ್ ನಲ್ಲಿ ಕೋವಿಡ್ 19 ಹಿನ್ನೆಲೆಯಲ್ಲಿ ವಿದೇಶಿಯರ ಆಗಮನಕ್ಕೆ ನಿರ್ಬಂಧ ಹೇರಿರುವುದರಿಂದ, ಅಲ್ಲಿಗೆ ಪ್ರಯಾಣ ಕೈಗೊಂಡು ದುಬೈ ಮತ್ತು ಅಬುಧಾಬಿಯಲ್ಲಿ ಸಿಲುಕಿರುವ ಭಾರತೀಯರು ಭಾರತಕ್ಕೆ ಹಿಂದಿರುಗುವಂತೆ ಭಾರತೀಯ ರಾಯಭಾರ ಕಚೇರಿ ನಿರ್ದೇಶಿಸಿದೆ. ಈ ಕುರಿತು ‘ದ ಇಂಡಿಯನ್ ಮಿಶನ್’ ಟ್ವೀಟ್ ಮಾಡಿದೆ.

ಯುಎಇಯಲ್ಲಿ ಸಿಲುಕಿರುವ ಎಲ್ಲಾ ಪ್ರಯಾಣಿಕರು ಭಾರತಕ್ಕೆ ಹಿಂದಿರುಗುವಂತೆ ಸಲಹೆ ನೀಡಲಾಗಿದೆ. ತಾವು ತಲುಪಬೇಕಾದ ದೇಶಗಳಲ್ಲಿ ನಿರ್ಬಂಧ ಅಂತಿಮವಾಗಿ ಹಿಂತೆಗೆದುಕೊಂಡ ಬಳಿಕ, ನಿಮ್ಮ ಮರು ಪ್ರಯಾಣವನ್ನು ಯೋಜಿಸಬಹುದು ಎಂದು ಸೂಚಿಸಲಾಗಿದೆ.

ಕಳೆದ ಡಿಸೆಂಬರ್ ನಿಂದ ಸೌದಿ ಅರೇಬಿಯಾಕ್ಕೆ ತೆರಳಲು ಉದ್ದೇಶಿಸಿರುವ ಸುಮಾರು 600ರಷ್ಟು ಭಾರತೀಯರು ಯುಎಇಯಲ್ಲೇ ಸಿಲುಕಿದ್ದಾರೆ ಎಂದು ವರದಿಯೊಂದು ತಿಳಿಸಿದೆ.  

Join Whatsapp
Exit mobile version