Home ರಾಷ್ಟ್ರೀಯ ಕೇಂದ್ರದ ನೆರವಿಲ್ಲದೆ ಆಂಧ್ರ ಪ್ರಗತಿಯ ಪಥದಲ್ಲಿ ಸಾಗಲು ಸಾಧ್ಯವೇ ಇಲ್ಲ: ಚಂದ್ರಬಾಬು ನಾಯ್ಡು

ಕೇಂದ್ರದ ನೆರವಿಲ್ಲದೆ ಆಂಧ್ರ ಪ್ರಗತಿಯ ಪಥದಲ್ಲಿ ಸಾಗಲು ಸಾಧ್ಯವೇ ಇಲ್ಲ: ಚಂದ್ರಬಾಬು ನಾಯ್ಡು

ಅಮರಾವತಿ: ಕೇಂದ್ರ ಸರ್ಕಾರದ ನೆರವು ಇಲ್ಲದೆ ಆಂಧ್ರ ಪ್ರದೇಶವು ಪ್ರಗತಿಯ ಪಥದಲ್ಲಿ ಸಾಗಲು ಸಾಧ್ಯವೇ ಇಲ್ಲ ಎಂದು ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಹೇಳಿದ್ದಾರೆ.


ಟಿಡಿಪಿ, ಬಿಜೆಪಿ ಮತ್ತು ಜನಸೇನಾ ಪಕ್ಷಗಳನ್ನೊಳಗೊಂಡ ಎನ್ ಡಿಎ ಮೈತ್ರಿಕೂಟದಲ್ಲಿರುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತನಾಡಿದ ನಾಯ್ಡು, ಕೇಂದ್ರ ಸರ್ಕಾರವು ರಾಜ್ಯಕ್ಕೆ ನೀಡುತ್ತಿರುವ ನೆರವು, ವೆಂಟಿಲೇಟರ್ ಮೂಲಕ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗೆ ಆಮ್ಲಜನಕ ನೀಡಿದಂತೆ ಎಂದು ಬಣ್ಣಿಸಿದ್ದಾರೆ.


ಕೇಂದ್ರದ ನೆರವಿನ ಮಹತ್ವ ಸಾರಿರುವ ಮುಖ್ಯಮಂತ್ರಿ, ಬರೋಬ್ಬರಿ ₹ 10 ಲಕ್ಷ ಕೋಟಿ ಸಾಲ ರಾಜ್ಯದ ಮೇಲಿದೆ. ಸುಮಾರು ₹ 1 ಲಕ್ಷ ಕೋಟಿಯಷ್ಟು ಬಿಲ್ ಬಾಕಿ ಇವೆ ಎಂದು ವಿವರಿಸಿದ್ದಾರೆ.


ಹಿಂದಿನ ವೈಎಸ್ ಆರ್ ಸಿಪಿ ಸರ್ಕಾರವು, ಬೊಕ್ಕಸದಲ್ಲಿದ್ದ ಹಣವನ್ನು ದುರುಪಯೋಗ ಮಾಡಿಕೊಂಡಿದ್ದೂ ಅಲ್ಲದೇ, ಕೇಂದ್ರದ ಅನುದಾನವನ್ನೂ ಬೇರಡೆ ವರ್ಗಾಯಿಸಿತ್ತು ಎಂದು ಆರೋಪಿಸಿದ್ದಾರೆ.

Join Whatsapp
Exit mobile version