Home ಟಾಪ್ ಸುದ್ದಿಗಳು ಅಂಬಿತ್ತಾಡಿ ಅಂಗನವಾಡಿ ನಿರ್ಮಾಣ ವಿಚಾರದಲ್ಲಿ ಸ್ಥಳೀಯರಿಗೆ ವಂಚಿಸುವ ಲೀಗ್ ಮತ್ತು ಶಾಸಕರ ನಡೆ ಖಂಡನೀಯ: ಅಶ್ರಫ್...

ಅಂಬಿತ್ತಾಡಿ ಅಂಗನವಾಡಿ ನಿರ್ಮಾಣ ವಿಚಾರದಲ್ಲಿ ಸ್ಥಳೀಯರಿಗೆ ವಂಚಿಸುವ ಲೀಗ್ ಮತ್ತು ಶಾಸಕರ ನಡೆ ಖಂಡನೀಯ: ಅಶ್ರಫ್ ಬಡಾಜೆ

ಮಂಜೇಶ್ವರ: ಉದ್ಯಾವರದ ಸ್ಥಳೀಯ ನಿವಾಸಿಗಳ ಬೇಡಿಕೆಗಳನ್ನು ಕಡೆಗಣಿಸಿ ಸಂಪೂರ್ಣ ರಾಜಕೀಯ ದ್ವೇಷದಿಂದ ಅಂಬಿತ್ತಾಡಿ ಅಂಗನವಾಡಿ ಸಮಸ್ಯೆಯಲ್ಲಿ ಹಸ್ತಕ್ಷೇಪ ಮಾಡುವ ಶಾಸಕ ಹಾಗೂ ಲೀಗ್ ನಾಯಕತ್ವದ ನಡೆ ಅವರ ಎಡಬಿಡಂಗಿತನಕ್ಕೆ ಮತ್ತೊಂದು ಊದಾಹರಣೆಯಾಗಿದೆ ಎಂದು ಎಸ್‌ಡಿಪಿಐ ಮಂಜೇಶ್ವರ ಮಂಡಲ ಅಧ್ಯಕ್ಷ ಅಶ್ರಫ್ ಬಡಾಜೆ ತಿಳಿಸಿದ್ದಾರೆ.

ಸ್ಥಳೀಯ ನಿವಾಸಿಗಳ ಅಗತ್ಯಗಳನ್ನು ಹಾಗೂ ಮೂಲಭೂತ ಸೌಕರ್ಯಗಳನ್ನು ಪೂರೈಸಲು ಎಸ್‌ಡಿಪಿಐ ನಿರಂತರವಾಗಿ ಶ್ರಮಿಸುತ್ತಿದೆ. 45 ದಿನದೊಳಗೆ ಸ್ಥಳೀಯ ನಿವಾಸಿಗಳು ಹೇಳಿದ ಜಾಗಕ್ಕೆ ಅಂಗನವಾಡಿ ತರುವುದಾಗಿ ಭರವಸೆ ನೀಡಿದವರು ಇಂದು ಎಲ್ಲವನ್ನೂ ಮರೆತು ಬಿಜೆಪಿ ಪರ ಕೆಲಸ ಮಾಡುತ್ತಿದ್ದಾರೆ. ಕಳೆದ ಪಂಚಾಯತ್ ಚುನಾವಣೆಯಲ್ಲಿ ಎಸ್‌ಡಿಪಿಐ ಯನ್ನು ಸೋಲಿಸಲು ಬಿಜೆಪಿಗೆ ನೀಡಿದ್ದ ಭರವಸೆಯನ್ನು ಲೀಗ್ ನಾಯಕತ್ವ ಈಡೇರಿಸುತ್ತಿದೆ. ಜನಪರ ಕೆಲಸ ಮಾಡಬೇಕಾದ ಶಾಸಕರು ಲೀಗ್ ನಾಯಕತ್ವದ ಕೈಗೊಂಬೆಯಾಗುವ ಮೂಲಕ ತನಗೆ ಬೇಕಾದವರ ಭವಿಷ್ಯಕ್ಕೆ ಸವಾಲು ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಮಗೆ ಬೇಕಾದ ಸ್ಥಳದಲ್ಲಿ ಅಂಗನವಾಡಿಗೆ ಅವಕಾಶ ನೀಡುವವರೆಗೂ ಸ್ಥಳೀಯ ನಿವಾಸಿಗಳು ಜೊತೆಗಿರುತ್ತಾರೆ. ಅದರ ಜತೆಗೆ ನೀಚ ರಾಜಕಾರಣ ಮಾಡುತ್ತಿರುವ ಸಂತ್ರಸ್ತರಿಗೆ ಮುಂಬರುವ ಚುನಾವಣೆಯ ಮೂಲಕ ಊರ ಜನತೆಯೇ ತಕ್ಕ ಉತ್ತರ ನೀಡಲಿದ್ದಾರೆ. ಮಂಜೇಶ್ವರದ ಜನತೆ ನಿಮ್ಮ ಕೋಪಕ್ಕೆ ಮಣಿಯುವ ಮೂರ್ಖರಲ್ಲ ಎಂದು ಅಶ್ರಫ್ ಬಡಾಜೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp
Exit mobile version