Home ಟಾಪ್ ಸುದ್ದಿಗಳು ನಿರಂತರ ವಿದ್ಯುತ್ ನೀಡಲು ಸೂಚನೆ: ಮಧು ಬಂಗಾರಪ್ಪ

ನಿರಂತರ ವಿದ್ಯುತ್ ನೀಡಲು ಸೂಚನೆ: ಮಧು ಬಂಗಾರಪ್ಪ

ಶಿವಮೊಗ್ಗ: ರಾಜ್ಯದಲ್ಲಿ ಬರಗಾಲದ ಛಾಯೆಯಿದೆ. ಆದರೆ ನಿರಂತರ ವಿದ್ಯುತ್ ನೀಡುವಂತೆ ಅಧಿಕಾರಿಗಳಿಗೆ ಹೇಳಿದ್ದೇವೆ. ಐದು ಗಂಟೆ ನಿರಂತರ ವಿದ್ಯುತ್ ನೀಡಿದರೆ ರೈತರಿಗೆ ಸಮಸ್ಯೆಯಾಗುವುದಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮುಗಿಯುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆಗೆ ಮಾತಾಡಿದ್ದೇನೆ ಎಂದರು.

ಕರ್ನಾಟಕವನ್ನು ಬಸವಣ್ಣನ ನಾಡು ಎಂಬ ಹೆಸರು ಬದಲಿಸುವ ಪ್ರಸ್ತಾಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಮಧು ಬಂಗಾರಪ್ಪ, ಎಂ.ಬಿ ಪಾಟೀಲ್ ಅವರು ವೈಯಕ್ತಿಕ ಅಭಿಪ್ರಾಯ ಕೊಟ್ಟಿದ್ದಾರೆ. ಬಸವಣ್ಣನವರು ಬಹಳ‌ ದೊಡ್ಡ ಸಮಾಜ ಸುಧಾರಕರು. ನಾನು ಆ ಬಗ್ಗೆ ಜಾಸ್ತಿ ಚರ್ಚೆ ಮಾಡಲು ಹೋಗುವುದಿಲ್ಲ. ತೀರ್ಮಾನವನ್ನು ಸರ್ಕಾರ ಮಾಡುತ್ತದೆ. ಬಸವಣ್ಣನವರ ಬಗ್ಗೆ ಬಹಳ ಅಪಾರ ಗೌರವ ಇದೆ. ಅವರ ಹಾಕಿ ಕೊಟ್ಟ ಮಾರ್ಗದರ್ಶನವನ್ನು ನಾನು ಸಿದ್ದರಾಮಯ್ಯ ನವರು ಅನುಸರಿಸುತ್ತೇವೆ ಎಂದರು.

Join Whatsapp
Exit mobile version