Home ಟಾಪ್ ಸುದ್ದಿಗಳು ಹೊಸ ವರ್ಷದ ದಿನವೇ ಪೊಲೀಸರ ಮುಂದೆ ಶರಣಾದ 44 ನಕ್ಸಲರು

ಹೊಸ ವರ್ಷದ ದಿನವೇ ಪೊಲೀಸರ ಮುಂದೆ ಶರಣಾದ 44 ನಕ್ಸಲರು

ಛತ್ತೀಸ್ ​ಗಢ್​ : ಹೊಸ ವರ್ಷದ ದಿನವೇ ಸುಕ್ಮಾ ಪೊಲೀಸರ ಮುಂದೆ ಸುಮಾರು 44 ನಕ್ಸಲರು ಶರಣಾಗಿದ್ದಾರೆ.

ನಕ್ಸಲ್ ನಿರ್ಮೂಲನಾ ಕಾರ್ಯಕ್ರಮವಾದ ‘ಪೂನಾ ನಾರ್ಕೋಮ್’ ಅಭಿಯಾನವನ್ನು ಸುಕ್ಮಾ ಜಿಲ್ಲೆಯಲ್ಲಿ ನಡೆಸಲಾಗುತ್ತಿದೆ. ಈ ಅಭಿಯಾನದ ಅಡಿಯಲ್ಲಿ, ಸುಕ್ಮಾ ಪೊಲೀಸರು ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ನಕ್ಸಲರನ್ನು ಮನವೊಲಿಸಲು ಮುಂದಾಗುತ್ತಿದ್ದಾರೆ. ‘ಪೂನಾ ನಾರ್ಕೋಮ್’ ಎಂದರೆ ಹೊಸ ಮುಂಜಾನೆ, ಹೊಸ ಆರಂಭ ಎಂಬ ಅರ್ಥ ಬರುತ್ತದೆ.

ನಕ್ಸಲರ ಶರಣಾಗತಿ ಬಗ್ಗೆ ಮಾತನಾಡಿದ ಸುಕ್ಮಾ ಎಸ್ಪಿ ಸುನಿಲ್ ಶರ್ಮಾ, ಹೊಸ ವರ್ಷದ ಮೊದಲ ದಿನ 300ರಿಂದ 350 ಗ್ರಾಮಸ್ಥರು ಕರಿಗುಂಡಂ ಗ್ರಾಮವನ್ನು ತಲುಪಿ ನಕ್ಸಲರನ್ನು ಪೊಲೀಸ್ ಶಿಬಿರಕ್ಕೆ ಕರೆತಂದಿದ್ದಾರೆ. ಈ ಮೂಲಕ ಸಮಾಜದ ಮುಖ್ಯವಾಹಿನಿಗೆ ನಕ್ಸಲರನ್ನು ಆಹ್ವಾನಿಸಲಾಗಿದೆ. ಈ ನಕ್ಸಲರು ಚಿಂತಗುಫಾ, ಚಿಂತಲ್ನಾರ್, ಭೆಜ್ಜಿ ಪ್ರದೇಶಗಳಲ್ಲಿ ವಿವಿಧ ಹಿಂಸಾತ್ಮಕ ಘಟನೆಗಳಲ್ಲಿ ಭಾಗಿಯಾಗಿದ್ದರು ಎಂದು ತಿಳಿಸಿದ್ದಾರೆ.

Join Whatsapp
Exit mobile version