Home ಟಾಪ್ ಸುದ್ದಿಗಳು 353 ಕೋಟಿ ರೂ. ಹಣಕ್ಕೂ ಕಾಂಗ್ರೆಸ್‌ಗೂ ಯಾವುದೇ ಸಂಬಂಧವಿಲ್ಲ: ಸಂಸದ ಧೀರಜ್ ಸಾಹು

353 ಕೋಟಿ ರೂ. ಹಣಕ್ಕೂ ಕಾಂಗ್ರೆಸ್‌ಗೂ ಯಾವುದೇ ಸಂಬಂಧವಿಲ್ಲ: ಸಂಸದ ಧೀರಜ್ ಸಾಹು

ನವದೆಹಲಿ: ಉದ್ಯಮಿ ಹಾಗೂ ಕಾಂಗ್ರೆಸ್ ಸಂಸದ ಧೀರಜ್ ಸಾಹುಗೆ ಸೇರಿದ 353 ಕೋಟಿ ರೂ.ಗಳನ್ನುಆದಾಯ ತೆರಿಗೆ ಇಲಾಖೆ ವಶಪಡಿಸಿಕೊಂಡಿದ್ದು, ಈ ಕುರಿತು ಸಾಹು ಮಾತನಾಡಿದ್ದಾರೆ. ಆ ಹಣಕ್ಕೂ ಕಾಂಗ್ರೆಸ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಧೀರಜ್, ಇಂದು ಏನಾಗುತ್ತಿದೆಯೋ ಅದು ನನಗೆ ದುಃಖವನ್ನುಂಟು ಮಾಡುತ್ತದೆ. ವಶಪಡಿಸಿಕೊಳ್ಳಲಾದ ಹಣ ನನ್ನ ಸಂಸ್ಥೆಗೆ ಸೇರಿದೆ. ಆ ನಗದು ನನ್ನ ಮದ್ಯದ ಸಂಸ್ಥೆಗಳಿಗೆ ಸಂಬಂಧಿಸಿದೆ ಇದು ಮದ್ಯ ಮಾರಾಟದ ಪ್ರಕ್ರಿಯೆಯಾಗಿದೆ. ಈ ಹಣಕ್ಕೂ ಕಾಂಗ್ರೆಸ್ ಅಥವಾ ಇತರ ಯಾವುದೇ ರಾಜಕೀಯ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಹಣವೆಲ್ಲ ನನ್ನದಲ್ಲ, ಅದು ನನ್ನ ಕುಟುಂಬ ಮತ್ತು ಇತರ ಸಂಬಂಧಿತ ಸಂಸ್ಥೆಗಳಿಗೆ ಸೇರಿದೆ. ಐಟಿ ಇಲಾಖೆಗೆ ಎಲ್ಲದಕ್ಕೂ ನಾನು ಲೆಕ್ಕ ನೀಡುತ್ತೇನೆ ಎಂದು ಹೇಳಿದ್ದಾರೆ.

Join Whatsapp
Exit mobile version