Home ಟಾಪ್ ಸುದ್ದಿಗಳು ಶಿರಾಡಿ ಘಾಟ್’ನಲ್ಲಿ ರಸ್ತೆಗೆ ಉರುಳಿದ ಮರ: ವಾಹನ ಸಂಚಾರ ಬಂದ್

ಶಿರಾಡಿ ಘಾಟ್’ನಲ್ಲಿ ರಸ್ತೆಗೆ ಉರುಳಿದ ಮರ: ವಾಹನ ಸಂಚಾರ ಬಂದ್

ಸಾಂದರ್ಭಿಕ ಚಿತ್ರ

ಹಾಸನ: ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ಶಿರಾಡಿ ಘಾಟ್ ಮಾರ್ಗದಲ್ಲಿ ಮರ ಉರುಳಿ ಬಿದ್ದಿದ್ದು, ಮಂಗಳೂರು-ಬೆಂಗಳೂರು ನಡುವೆ ಸಂಪರ್ಕ ಕಲ್ಪಿಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ವಾಹನ ಸಂಚಾರ ಬಂದ್ ಆಗಿದೆ.


ತಿಂಗಳುಗಳ ನಂತರ ಬಿರುಸಿನ ಮಳೆ ಸುರಿದಿದೆ. ಪರಿಣಾಮ ಮರ ಉರುಳಿದ್ದು ವಾಹನಗಳು ಸಂಚಾರ ಮಾಡಲು ಆಗದ ಸ್ಥಿತಿ ಬಂದಿದೆ.


ಅರಣ್ಯ, ಹೆದ್ದಾರಿ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ತೆರಳಿ ಮರ ತೆರವಿಗೆ ಯತ್ನ ಆರಂಭಿಸಿದ್ದಾರೆ. ಎರಡು ಗಂಟೆಗೂ ಹೆಚ್ಚುಕಾಲ ವಾಹನಗಳಲ್ಲೆ ಸಿಲುಕಿರುವ ಪ್ರಯಾಣಿಕರು ಪರದಾಡುವಂತಾಗಿದೆ.

Join Whatsapp
Exit mobile version