Home ಟಾಪ್ ಸುದ್ದಿಗಳು ಲೋಕಸಭೆ ಚುನಾವಣೆ: ಟಿಎಂಸಿ–ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಲೋಕಸಭೆ ಚುನಾವಣೆ: ಟಿಎಂಸಿ–ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಕೋಲ್ಕತ್ತ: ಲೋಕಸಭೆ ಚುನಾವಣೆಯ ನಾಲ್ಕನೇ ಹಂತದಲ್ಲಿ ಪಶ್ವಿಮ ಬಂಗಾಳ ಎಂಟು ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದ್ದು, ಪಶ್ಚಿಮ ಬರ್ಧಮಾನ್ ಜಿಲ್ಲೆಯ ದುರ್ಗಾಪುರದಲ್ಲಿ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ.


ಘರ್ಷಣೆಯ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಉಭಯ ಪಕ್ಷದ ಕಾರ್ಯಕರ್ತರು ತಳ್ಳಾಟ ನಡೆಸಿದ್ದಾರೆ. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಯತ್ನಿಸಿದ್ದಾರೆ.


ಈ ಕುರಿತಂತೆ ಸುದ್ದಿಸಂಸ್ಥೆ ಎಎನ್ ಐ ಜೊತೆ ಮಾತನಾಡಿದ ಟಿಎಂಸಿ ನಾಯಕ ರಾಮ್ ಪ್ರಸಾದ್ ಹಲ್ದಾರೆ, ‘ಬೆಳಗ್ಗೆ 6 ಗಂಟೆಯಿಂದಲೇ ಕೇಂದ್ರ ಪಡೆಗಳೊಂದಿಗೆ ಇಲ್ಲಿಗೆ ಬಂದ ಬಿಜೆಪಿಗರು ಮತದಾರರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದಾರೆ. ಇದರ ವಿರುದ್ಧ ನಾವು ಪ್ರತಿಭಟನೆ ಮಾಡಿದ್ದೇವು. ಮತದಾರರೂ ಪ್ರತಿಭಟನೆ ನಡೆಸಿದ್ದಾರೆ. ಹೊರಗಿನಿಂದ ಪೋಲಿಂಗ್ ಏಜೆಂಟರನ್ನು ಕರೆತರಲು ಯತ್ನಿಸುತ್ತಿದ್ದಾರೆ’ ಎಂದು ಆರೋಪಿಸಿದರು.

Join Whatsapp
Exit mobile version