Home ಆರೋಗ್ಯ ಮಕ್ಕಳು ಹಲ್ಲು ನುಂಗಿದರೆ ಅಪಾಯವಿದೆಯೇ?

ಮಕ್ಕಳು ಹಲ್ಲು ನುಂಗಿದರೆ ಅಪಾಯವಿದೆಯೇ?

ಸಾಮಾನ್ಯವಾಗಿ ಮಕ್ಕಳು 5-6ರ ವಯಸ್ಸಿಗೆ ಬರುತ್ತಿರುವಂತೆ ಹಲ್ಲುಗಳು ಬಿದ್ದು ಶಾಶ್ವತ ಹಲ್ಲುಗಳು ಹುಟ್ಟಲು ಶುರುವಾಗುತ್ತದೆ.


ಹೀಗಿರುವಾಗ ಮಕ್ಕಳು ಹಲ್ಲುಗಳನ್ನು ಕೆಲವು ಬಾರಿ ಆಟವಾಡುತ್ತಾ ಗೊತ್ತಿಲ್ಲದೇ ನುಂಗಿಯೂ ಇರಬಹುದು. ಒಂದೊಮ್ಮೆ ಮಕ್ಕಳು ಹಲ್ಲು ನುಂಗಿದರೆ ಏನಾಗುತ್ತದೆ ಎನ್ನುವ ವಿಚಾರದ ಕುರಿತು ನಾವಿಲ್ಲಿ ಮಾಹಿತಿ ನೀಡಲಿದ್ದೇವೆ.


ನ್ಯಾಷನಲ್ ಹೆಲ್ತ್ ಸರ್ವೀಸ್ ವರದಿ ಪ್ರಕಾರ, ಬಹುತೇಕ ನುಂಗಿದ ಎಲ್ಲಾ ವಸ್ತುಗಳು, ಚೂಪಾದ ವಸ್ತುಗಳು ಸೇರಿದಂತೆ ಎಲ್ಲವೂ ಯಾವುದೇ ಹಾನಿ ಮಾಡದೇ ಜೀರ್ಣಾಂಗ ವ್ಯವಸ್ಥೆಯ ಮೂಲಕ ಹಾದು ಹೋಗುತ್ತವೆ. ಜೀರ್ಣಾಂಗವ್ಯೂಹದ ಕಿರಿದಾದ ಭಾಗದಿಂದ ಒಂದು ವಸ್ತುವು ಹಾದುಹೋಗಿ, ಅನ್ನನಾಳವು ಹೊಟ್ಟೆಯನ್ನು ಸೇರುತ್ತದೆ. ಅದು ಯಾವುದೇ ತೊಂದರೆ ಇಲ್ಲದೆ ಹಾದುಹೋಗುತ್ತದೆ ಎಂದು ಯುರೋಪಿಯನ್ ಸೊಸೈಟಿ ಆಫ್ ಗ್ಯಾಸ್ಟ್ರೋಇಂಟೆಸ್ಟಿನ್ ಎಂಡೋಸ್ಕೋಪಿ ಹೇಳಿದೆ.

Join Whatsapp
Exit mobile version