Home ಟಾಪ್ ಸುದ್ದಿಗಳು ಕಾಂಗ್ರೆಸ್ ಪಕ್ಷವನ್ನು ನಗರ ನಕ್ಸಲರ ಗುಂಪು ನಡೆಸುತ್ತಿದೆ: ಪ್ರಧಾನಿ ಮೋದಿ ಆರೋಪ

ಕಾಂಗ್ರೆಸ್ ಪಕ್ಷವನ್ನು ನಗರ ನಕ್ಸಲರ ಗುಂಪು ನಡೆಸುತ್ತಿದೆ: ಪ್ರಧಾನಿ ಮೋದಿ ಆರೋಪ

ವಾಶಿಮ್: ಕಾಂಗ್ರೆಸ್ ಪಕ್ಷವನ್ನು ನಗರ ನಕ್ಸಲರ ಗುಂಪು ನಡೆಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

ಮೋದಿ ಇಂದು ಮೋದಿ ಇಂದು ಮಹಾರಾಷ್ಟ್ರದ ವಾಶಿಮ್ ಗೆ ಭೇಟಿ ನೀಡಿದ್ದು, ಅಲ್ಲಿ ಅವರು ಬಂಜಾರ ಹೆರಿಟೇಜ್ ಮ್ಯೂಸಿಯಂ ಅನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಆ ಪಕ್ಷದ ಅಪಾಯಕಾರಿ ಅಜೆಂಡಾವನ್ನು ಸೋಲಿಸಲು ಜನರು ಒಂದಾಗಬೇಕು ಎಂದು ಕರೆ ನೀಡಿದ್ದಾರೆ. ಕಾಂಗ್ರೆಸ್ ತನ್ನ ಸ್ವಾರ್ಥ ರಾಜಕಾರಣಕ್ಕಾಗಿ ಬಡವರನ್ನು ಲೂಟಿ ಮಾಡುತ್ತಿದ್ದು, ಅವರ ಸ್ಥಿತಿಯನ್ನು ಸುಧಾರಿಸುತ್ತಿಲ್ಲ ಎಂದು ಮೋದಿ ಆರೋಪಿಸಿದ್ದಾರೆ.


ಕಾಂಗ್ರೆಸ್ ಗೆ ತನ್ನ ಸ್ವಾರ್ಥ ರಾಜಕಾರಣಕ್ಕಾಗಿ ಬಡವರನ್ನು ಲೂಟಿ ಮಾಡಿ ಬಡವರನ್ನು ಉಳಿಸುವುದು ಮಾತ್ರ ಗೊತ್ತು. ಜನರನ್ನು ಒಡೆಯುವುದು ಮಾತ್ರ ಅದಕ್ಕೆ ಗೊತ್ತು. ನಾವು ಎಚ್ಚೆತ್ತುಕೊಂಡು ಒಗ್ಗಟ್ಟಿನಿಂದ ಇರಬೇಕು. ನಗರ ನಕ್ಸಲರ ಗ್ಯಾಂಗ್ ನಿಂದ ಕಾಂಗ್ರೆಸ್ ಪಕ್ಷ ನಡೆಯುತ್ತಿದೆ” ಎಂದು ಮೋದಿ ಆರೋಪಿಸಿದರು.


ಭಾರತದ ಅಭಿವೃದ್ಧಿಯ ಉದ್ದೇಶವನ್ನು ಹೊಂದಿರದ ಜನರೊಂದಿಗೆ ಕಾಂಗ್ರೆಸ್ ಗಟ್ಟಿಯಾಗಿ ನಿಂತಿದೆ. ಇತ್ತೀಚೆಗಷ್ಟೇ ದೆಹಲಿಯಲ್ಲಿ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದ್ದು, ಕಾಂಗ್ರೆಸ್ ಮುಖಂಡರೊಬ್ಬರು ಕಿಂಗ್ ಪಿನ್ ಆಗಿರುವ ಶಂಕೆ ವ್ಯಕ್ತವಾಗಿದೆ. ಯುವಕರನ್ನು ಡ್ರಗ್ಸ್ ಕಡೆಗೆ ತಳ್ಳಿ ಅದರಿಂದ ಬರುವ ಹಣದಿಂದ ಚುನಾವಣೆ ಎದುರಿಸಲು ಕಾಂಗ್ರೆಸ್ ಬಯಸಿದೆ ಎಂದು ಮೋದಿ ಟೀಕಿಸಿದ್ದಾರೆ.

Join Whatsapp
Exit mobile version