Home ಟಾಪ್ ಸುದ್ದಿಗಳು ಇಸ್ರೋ ಗೂಢಚರ್ಯೆ ಪ್ರಕರಣ: ಮಾಜಿ ಅಧಿಕಾರಿಗಳಿಗೆ ನಿರೀಕ್ಷಣಾ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಇಸ್ರೋ ಗೂಢಚರ್ಯೆ ಪ್ರಕರಣ: ಮಾಜಿ ಅಧಿಕಾರಿಗಳಿಗೆ ನಿರೀಕ್ಷಣಾ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ನವದೆಹಲಿ: 1994ರ ಇಸ್ರೋ ಬೇಹುಗಾರಿಗೆ ಪ್ರಕರಣದಲ್ಲಿ ವಿಜ್ಞಾನಿ ನಂಬಿ ನಾರಾಯಣನ್ ಅವರ ಕೈವಾಡವಿದೆ ಎಂದು ಅವರನ್ನು ಪ್ರಕರಣದಲ್ಲಿ ಸಿಲುಕಿಸಿದ್ದ ಆರೋಪ ಎದುರಿಸುತ್ತಿರುವ ಮಾಜಿ ಪೊಲೀಸ್ ಮಹಾನಿರ್ದೇಶಕ(ಡಿಜಿಪಿ) ಸೇರಿದಂತೆ ನಾಲ್ವರು ಪೊಲೀಸ್ ಅಧಿಕಾರಿಗಳಿಗೆ ನೀಡಲಾಗಿದ್ದ ನಿರೀಕ್ಷಣಾ ಜಾಮೀನನ್ನು ಸುಪ್ರೀಂ ಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ.

ನ್ಯಾ. ಎಂ.ಆರ್. ಶಾ ಹಾಗೂ ನ್ಯಾ. ಸಿ.ಟಿ. ರವಿಕುಮಾರ್ ಅವರನ್ನು ಒಳಗೊಂಡಿದ್ದ ಪೀಠವು ಈ ಆದೇಶ ನೀಡಿದ್ದು, ನಾಲ್ವರು ಆರೋಪಿಗಳನ್ನು ಇನ್ನು ಐದು ವಾರಗಳ ಕಾಲ ಬಂಧಿಸದಂತೆಯೂ ಸಿಬಿಐಗೆ ನಿರ್ದೇಶಿಸಿದೆ

ಎಲ್ಲ ಮೇಲ್ಮನವಿಗಳಿಗೂ ಅವಕಾಶ ನೀಡಲಾಗಿದೆ. ಹೈಕೋರ್ಟ್ ನೀಡಿರುವ ನಿರೀಕ್ಷಣಾ ಜಾಮೀನು ಆದೇಶವನ್ನು ರದ್ದುಪಡಿಸಿ, ಅದನ್ನು ಬದಿಗಿಡಲಾಗಿದೆ. ಎಲ್ಲ ಪ್ರಕರಣಗಳನ್ನು ಮತ್ತೆ ಹೈಕೋರ್ಟ್’ಗೆ ಮರಳಿಸಲಾಗಿದ್ದು, ಅವುಗಳ ಜ್ಯೇಷ್ಠತೆಯನ್ನು ಆಧರಿಸಿ ಪ್ರತ್ಯೇಕವಾಗಿ ನಿರ್ಣಯ ಕೈಗೊಳ್ಳಬೇಕು. ಯಾವುದೇ ಆರೋಪಿಯ ಮನವಿಯನ್ನು ಜ್ಯೇಷ್ಠತೆಯ ಆಧಾರದಲ್ಲಿ ಪರಿಗಣಿಸಿರುವುದು ನ್ಯಾಯಾಲಯದ ಗಮನಕ್ಕೆ ಬಂದಿಲ್ಲ” ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.

ಇನ್ನು ಆದೇಶ ಹೊರಡಿಸುವುದು ಹೈಕೋರ್ಟ್ ಗೆ ಬಿಟ್ಟಿದ್ದು. ಹೈಕೋರ್ಟ್ ಆದಷ್ಟೂ ಶೀಘ್ರವಾಗಿ, ಅದರಲ್ಲೂ ನಾಲ್ಕು ವಾರಗಳೊಳಗೆ ನಿರೀಕ್ಷಣಾ ಜಾಮೀನು ಅರ್ಜಿ ಕುರಿತು ನಿರ್ಧಾರ ತಳೆಯಬೇಕು ಎಂದು ಪೀಠವು ಸೂಚಿಸಿದೆ

Join Whatsapp
Exit mobile version