Home ಟಾಪ್ ಸುದ್ದಿಗಳು ವಿಜಯಪುರ: ತಲೆ ಮೇಲೆ ಕಲ್ಲು ಹಾಕಿ ಯುವಕನ ಹತ್ಯೆ

ವಿಜಯಪುರ: ತಲೆ ಮೇಲೆ ಕಲ್ಲು ಹಾಕಿ ಯುವಕನ ಹತ್ಯೆ

ವಿಜಯಪುರ: ತಡರಾತ್ರಿ ದುಷ್ಕರ್ಮಿಗಳು ಯುವಕನ ಮೇಲೆ ಮಾರಕಷ್ಟಗಳಿಂದ ಹಲ್ಲೆ ಮಾಡಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆಗೈದಿರುವ ಘಟನೆ ನಗರದ ಎಪಿಎಂಸಿ ಮೇಕೆ ಹಾಗೂ ಕುರಿ ಮಾರುಕಟ್ಟೆ ಬಳಿ ನಡೆದಿದೆ.

ರೋಹಿತ್ ವಸಂತ್ ಪವಾರ್ (23) ಕೊಲೆಯಾದ ಯುವಕ. ವಿಜಯಪುರ ನಗರದ ಕಂಬಾರ ಓಣಿ ನಿವಾಸಿ ರೋಹಿತ್​ನನ್ನು ದುಷ್ಕರ್ಮಿಗಳು​​ ಕೊಲೆಗೈದು ಮುಳ್ಳುಕಂಟಿಯಲ್ಲಿ ಶವ ಬಿಸಾಡಿದ್ದಾರೆ. ಘಟನಾ ಸ್ಥಳದಲ್ಲಿ ಬಿಯರ್​​​ ಬಾಟಲ್​ ಹಾಗೂ​ ಚಿಪ್ಸ್​ ಪ್ಯಾಕೆಟ್​ ಪತ್ತೆಯಾಗಿದೆ. ಮೃತನ ಪರಿಚಯಸ್ಥರಿಂದಲೇ ಕೊಲೆ ನಡೆದಿರುವ ಶಂಕೆಯನ್ನು ಮೃತನ ಕುಟುಂಬ ಆರೋಪಿಸಿದೆ.

ಮೇಲ್ನೋಟಕ್ಕೆ ಇದು ಯುವಕನ ಪರಿಚಯಸ್ಥರಿಂದಲೇ ಈ ಒಂದು ಕೊಲೆ ನಡೆದಿದೆ ಎಂದು ಹೇಳಲಾಗುತ್ತಿದೆ.

Join Whatsapp
Exit mobile version