Home ಟಾಪ್ ಸುದ್ದಿಗಳು ಭಾರತಕ್ಕೆ ಅತಿ ಹೆಚ್ಚು ದ್ವೇಷ ಭಾಷಣಗಳನ್ನು ಹೊಂದಿರುವ ದೇಶ ಎಂಬ ಕುಖ್ಯಾತಿ

ಭಾರತಕ್ಕೆ ಅತಿ ಹೆಚ್ಚು ದ್ವೇಷ ಭಾಷಣಗಳನ್ನು ಹೊಂದಿರುವ ದೇಶ ಎಂಬ ಕುಖ್ಯಾತಿ

ಬೆಂಗಳೂರು: ಅತಿ ಹೆಚ್ಚು ದ್ವೇಷ ಭಾಷಣಗಳನ್ನು ಹೊಂದಿರುವ ದೇಶ ಎಂಬ ಕುಖ್ಯಾತಿಗೆ ಭಾರತ ಪಾತ್ರವಾಗಿದೆ ಎಂದು ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಸಂಸ್ಥಾಪಕ ಮತ್ತು ಅಧ್ಯಕ್ಷ ತ್ರಿಲೋಚನ್ ಶಾಸ್ತ್ರಿ ಅವರು ಶನಿವಾರ ಹೇಳಿದ್ದಾರೆ.

ಪಿಕೆ ಡೇ ಸ್ಮಾರಕ ಉಪನ್ಯಾಸದಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಸ್ವತಂತ್ರ ಸಂಸ್ಥೆಗಳಿಗೆ ಬೆದರಿಕೆ ವಿಷಯದ ಕುರಿತು ಮಾತನಾಡಿದ ಅವರು,ನಾವು ಪ್ರಜಾಪ್ರಭುತ್ವವಾಗಿ ವಿಕಸನಗೊಂಡಿಲ್ಲ ಎಂದು ಹೇಳಿದರು.

ಭಾರತೀಯ ಚುನಾವಣಾ ಆಯೋಗವು (ಇಸಿಐ) ಸ್ವತಂತ್ರ ಸಂಸ್ಥೆಯಾಗಿದ್ದು, ದ್ವೇಷದ ಭಾಷಣ ಮತ್ತು ಇತರ ಹಲವಾರು ಚುನಾವಣಾ ನೀತಿ ಸಂಹಿತೆ (MCC) ಉಲ್ಲಂಘನೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾಗರಿಕ ಸಮಾಜ ಗುಂಪುಗಳು ಮತ್ತು ಇತರೆ ಸಾಮಾನ್ಯ ವ್ಯಕ್ತಿಗಳಿಂದ 20,000 ಕ್ಕೂ ಹೆಚ್ಚು ದೂರುಗಳು ಆಯೋಗಕ್ಕೆ ಸಲ್ಲಿಕೆಯಾಗಿವೆ. ಆದಾಗ್ಯೂ, ಯಾವುದೇ ಕ್ರಮಗಳಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇದೇ ವೇಳೆ ಆರೋಗ್ಯಕರ ಪ್ರಜಾಪ್ರಭುತ್ವಕ್ಕಾಗಿ ಕೇಂದ್ರ ಚುನಾವಣಾ ಅಯೋಗ, ನ್ಯಾಯಾಂಗ, ಸಿಬಿಐ, ಆದಾಯ ತೆರಿಗೆ ಇಲಾಖೆ ಮತ್ತು ಇತರ ಸ್ವತಂತ್ರ ಸಂಸ್ಥೆಗಳನ್ನು ಹೆಚ್ಚುವರಿ ಕಾರ್ಯಕಾರಿ ಅಧಿಕಾರದಿಂದ ಮುಕ್ತವಾಗಿಡುವ ಅಗತ್ಯವನ್ನು ಅವರು ಒತ್ತಿ ಹೇಳಿದರು.

ಸಾಮಾನ್ಯ ವ್ಯಕ್ತಿ ಕಾನೂನನ್ನು ಉಲ್ಲಂಘಿಸಿದಾಗ, ಅವನನ್ನು ಬಂಧಿಸಿ ಜೈಲಿಗೆ ಹಾಕಲಾಗುತ್ತದೆ. ಸರ್ಕಾರ ಅಥವಾ ಪೋಲೀಸರು ಕಾನೂನು ಉಲ್ಲಂಘಿಸಿದಾಗ ಏನು ಮಾಡುತ್ತಾರೆ? ಇದಕ್ಕೆ ನಮ್ಮ ಸಂವಿಧಾನದಲ್ಲಿ ಉತ್ತರವಿಲ್ಲ. ಅಮೆರಿಕಾದಲ್ಲಿ ಇದಕ್ಕೆ ಕಾನೂನು ಇದೆ ಎಂದರು.

Join Whatsapp
Exit mobile version