Home ಟಾಪ್ ಸುದ್ದಿಗಳು ಗೃಹಿಣಿಯರನ್ನುಗುರಿಪಡಿಸುವುದು ಹೇಡಿತನದ ಕೃತ್ಯ: ಈಡಿ ಸಮನ್ಸ್ ಕುರಿತು ಸಂಜಯ್ ರಾವುತ್

ಗೃಹಿಣಿಯರನ್ನುಗುರಿಪಡಿಸುವುದು ಹೇಡಿತನದ ಕೃತ್ಯ: ಈಡಿ ಸಮನ್ಸ್ ಕುರಿತು ಸಂಜಯ್ ರಾವುತ್

ಮುಂಬೈ: ಪಿ.ಎಂ.ಸಿ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ತನ್ನ ಪತ್ನಿಗೆ ಜಾರಿ ನಿರ್ದೇಶನಾಲಯ (ಈಡಿ) ಸಮನ್ಸ್ ಕಳುಹಿಸಿರುವುದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಶಿವಸೇನಾ ಸಂಸದ ಸಂಜಯ್ ರಾವುತ್,ಗೃಹಿಣಿಯರನ್ನು ಗುರಿಪಡಿಸುವುದು ‘ಹೇಡಿತನದ ಕೃತ್ಯ’ ಎಂದಿದ್ದಾರೆ.

ನಾವು ಯಾರನ್ನೂ ಭಯಪಟ್ಟಿಲ್ಲ ಮತ್ತು ಅದರಂತೆ ಪ್ರತಿಕ್ರಿಯಿಸಲಿದ್ದೇವೆ ಎಂದು ರಾವುತ್ ವರದಿಗಾರರಿಗೆ ಹೇಳಿದ್ದಾರೆ.

“ಕಳೆದ ಒಂದು ವರ್ಷದಲ್ಲಿ ಶರದ್ ಪವಾರ್, ಏಕನಾಥ್ ಖಡ್ಸೆ ಮತ್ತು ಪ್ರತಾಪ್ ಸರ್ ನಾಯಕ್ ನೊಟೀಸನ್ನು ಪಡೆದಿದ್ದಾರೆ ಮತ್ತು ಈಗ ನೀವೆಲ್ಲರೂ ನನ್ನ ಹೆಸರನ್ನು ಚರ್ಚಿಸುತ್ತಿದ್ದೀರಿ. ಈ ಎಲ್ಲಾ ಜನರು ಮಹಾರಾಷ್ಟ್ರದಲ್ಲಿ ಸರಕಾರ ರಚನೆಗೆ ನಿರ್ಣಾಯಕವಾಗಿದ್ದರು” ಎಂದು ರಾವುತ್ ಹೇಳಿದರು.

“ ಗೃಹಣಿಯರನ್ನು ಗುರಿಪಡಿಸುವುದು ಹೇಡಿತನದ ಕೃತ್ಯವಾಗಿದೆ. ನಾವು ಯಾರನ್ನೇ ಭಯಪಟ್ಟಿಲ್ಲ. ಈಡಿಗೆ ಕೆಲವು ಕಾಗದ ಪತ್ರಗಳು ಬೇಕಾಗಿದ್ದವು ಮತ್ತು ಸಮಯಕ್ಕೆ ಸರಿಯಾಗಿ ಅದನ್ನು ಮಂಡಿಸಿದ್ದೇವೆ” ಎಂದು ಅವರು ತಿಳಿಸಿದರು.

Join Whatsapp
Exit mobile version